ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಹರ್ಭಜನ್‌ ಸಿಂಗ್‌'ಗೆ ದೇಸಿ ಕ್ರಿಕೆಟಿಗರು ಎದುರಿಸುತ್ತಿರುವ ವೇತನ ಸಮಸ್ಯೆ ಕಣ್ಣಿಗೆ ಬಿದ್ದಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ತಮ್ಮ ಮಾಜಿ ನಾಯಕ ಹಾಗೂ ಭಾರತ ತಂಡದ ಹಾಲಿ ಕೋಚ್‌ ಅನಿಲ್‌ ಕುಂಬ್ಳೆಗೆ ಪತ್ರವೊಂದನ್ನು ಬರೆದಿದ್ದಾರೆ. ಕುಂಬ್ಳೆ ಇದೇ 21ರಂದು ರಾಷ್ಟ್ರೀಯ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ಪ್ರಸ್ತುತಿ ಸಲ್ಲಿಸಲಿದ್ದು, ಈ ವೇಳೆ ದೇಸಿ ಕ್ರಿಕೆಟಿಗರ ವೇತನ ಹೆಚ್ಚಳ ವಿಷಯವನ್ನೂ ಪ್ರಸ್ತಾಪಿಸುವಂತೆ ಹರ್ಭಜನ್‌, ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ನವದೆಹಲಿ(ಮೇ.18): ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಹರ್ಭಜನ್‌ ಸಿಂಗ್‌'ಗೆ ದೇಸಿ ಕ್ರಿಕೆಟಿಗರು ಎದುರಿಸುತ್ತಿರುವ ವೇತನ ಸಮಸ್ಯೆ ಕಣ್ಣಿಗೆ ಬಿದ್ದಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ತಮ್ಮ ಮಾಜಿ ನಾಯಕ ಹಾಗೂ ಭಾರತ ತಂಡದ ಹಾಲಿ ಕೋಚ್‌ ಅನಿಲ್‌ ಕುಂಬ್ಳೆಗೆ ಪತ್ರವೊಂದನ್ನು ಬರೆದಿದ್ದಾರೆ. ಕುಂಬ್ಳೆ ಇದೇ 21ರಂದು ರಾಷ್ಟ್ರೀಯ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ಪ್ರಸ್ತುತಿ ಸಲ್ಲಿಸಲಿದ್ದು, ಈ ವೇಳೆ ದೇಸಿ ಕ್ರಿಕೆಟಿಗರ ವೇತನ ಹೆಚ್ಚಳ ವಿಷಯವನ್ನೂ ಪ್ರಸ್ತಾಪಿಸುವಂತೆ ಹರ್ಭಜನ್‌, ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಪತ್ರದಲ್ಲಿ ಭಜ್ಜಿ ‘‘ಕಳೆದ 2-3 ವರ್ಷಗಳಿಂದ ನಾನು ರಣಜಿ ಟ್ರೋಫಿಯಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ದೇಸಿ ಪಂದ್ಯಾವಳಿಯಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಆಟಗಾರ ಪ್ರತಿ ಪಂದ್ಯಕ್ಕೆ ಕೇವಲ .1.5 ಲಕ್ಷ ಪಡೆಯುತ್ತಾನೆ. ಒಂದು ಋುತುವಿನಲ್ಲಿ ಆತನಿಗೆ ಎಷ್ಟುಪಂದ್ಯದಲ್ಲಿ ಅವಕಾಶ ಸಿಗಲಿದೆ ಎನ್ನುವುದರ ಕುರಿತು ನಿಶ್ಚಿತ ಮಾಹಿತಿ ಇರುವುದಿಲ್ಲ. ಹೀಗಾಗಿ ಆ ಕ್ರಿಕೆಟ್‌ ನಂಬಿಕೊಂಡೇ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ಬರೆದಿದ್ದಾರೆ. ಜತೆಗೆ ‘‘ಎಲ್ಲರಿಗೂ ಐಪಿಎಲ್‌ ಅವಕಾಶವೂ ಸಿಗುವುದಿಲ್ಲ. ಹೀಗಾಗಿ ನೀವು ಬಿಸಿಸಿಐ ಅಧಿಕಾರಿಗಳ ಜತೆ ಮಾತುಕಥೆ ನಡೆಸಬೇಕು. ಸಚಿನ್‌, ದ್ರಾವಿಡ್‌, ಲಕ್ಷ್ಮಣ್‌, ಸೆಹ್ವಾಗ್‌ರಂತಹ ಹಿರಿಯರೂ ಈ ಕುರಿತು ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇನೆ'' ಎಂದು ಹರ್ಭಜನ್‌ ಪತ್ರದಲ್ಲಿ ತಿಳಿಸಿದ್ದಾರೆ.