ಮಾ.23ರಂದು ಭಗತ್‌ಸಿಂಗ್‌'ರ 87ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ, ಅವರ ವಿಚಾರಧಾರೆಗಳನ್ನು ಅನುಸರಿಸುವಂತೆ ಭಜ್ಜಿ ಯುವಕರಿಗೆ ವಿಡಿಯೋವೊಂದರ ಮೂಲಕ ಮನವಿ ಮಾಡಿದ್ದಾರೆ.

ನವದೆಹಲಿ(ಮಾ.21): ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌'ಗೆ ಗೌರವ ನಮನ ಸಲ್ಲಿಸಿದ್ದಾರೆ.

ಮಾ.23ರಂದು ಭಗತ್‌ಸಿಂಗ್‌'ರ 87ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ, ಅವರ ವಿಚಾರಧಾರೆಗಳನ್ನು ಅನುಸರಿಸುವಂತೆ ಭಜ್ಜಿ ಯುವಕರಿಗೆ ವಿಡಿಯೋವೊಂದರ ಮೂಲಕ ಮನವಿ ಮಾಡಿದ್ದಾರೆ.

Scroll to load tweet…

‘ಯುವಜನಾಂಗ ಎಚ್ಚೆತ್ತುಕೊಳ್ಳಬೇಕು. ಭಗತ್‌ ಸಿಂಗ್ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು’ ಎಂದು ಹರ್ಭಜನ್, ಯುವಜನರನ್ನು ಪ್ರೇರಿಪಿಸುವ ವಿಡಿಯೋ ಸಂದೇಶವೊಂದನ್ನು ನೀಡಿದ್ದಾರೆ. ಯೂಟೂಬ್‌'ನಲ್ಲಿ ಈ ವಿಡಿಯೋ ಭಾರೀ ಹಿಟ್ ಆಗಿದೆ.