ಹೈದರಾಬಾದ್(ಮೇ.14): ಐಪಿಎಲ್ 12ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪ್ರಶಸ್ತಿಗಾಗಿ ಅತ್ಯಂತ ರೋಚಕ ಹೋರಾಟ ನಡೆಸಿತ್ತು. ತಂಡವನ್ನು ಗೆಲುವಿನ ದಡ ಸೇರಿಸಲು ಚೆನ್ನೈ ಆರಂಭಿಕ ಶೇನ್ ವ್ಯಾಟ್ಸನ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇದೀಗ ವ್ಯಾಟ್ಸನ್ ಮೊಣಕಾಲಿನ ಗಾಯದಿಂದ ರಕ್ತ ಸೋರುತ್ತಿದ್ದರೂ ತಂಡಕ್ಕೆ ಬ್ಯಾಟ್ ಬೀಸಿದ ಸತ್ಯ ಇದೀಗ ಹೊರಬಂದಿದೆ.

ಇದನ್ನೂ ಓದಿ: IPL 2019: ದೊಡ್ಡ ಮೊತ್ತಕ್ಕೆ ಹರಾಜಾಗಿ ಫ್ಲಾಫ್ ಆದ ಸ್ಟಾರ್ಸ್!

ಫೈನಲ್ ಪಂದ್ಯದ ಬಳಿಕ ಶೇನ್ ವ್ಯಾಟ್ಸನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ವ್ಯಾಟ್ಸನ್ ಬ್ಯಾಟಿಂಗ್ ಮಾಡುತ್ತಿದ್ದ ಫೋಟೋದಲ್ಲಿ ಮೊಣಕಾಲಿನ ಭಾಗ ಕೆಂಪಾಗಿತ್ತು. ರಕ್ತದಿಂದ ಜರ್ಸಿ ಒದ್ದೆಯಾಗಿತ್ತು. ಕೆಲವರು ಇದು ನಕಲಿ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಸಹ ಆಟಗಾರ ಹರ್ಭಜನ್ ಸಿಂಗ್ ಇದೀಗ ಫೋಟೋ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ. ಇದು ನಕಲಿ ಅಲ್ಲ, ಅಸಲಿ ಫೋಟೋ ಎಂದು ಭಜ್ಜಿ ಹೇಳಿದ್ದಾರೆ.

ಇದನ್ನೂ ಓದಿ: ಧೈರ್ಯ ಸಾಕಾಗಲಿಲ್ಲ- ಕೊನೆಯ ಎಸೆತ ನೋಡ್ಲಿಲ್ಲ: ನೀತಾ ಅಂಬಾನಿ

ವ್ಯಾಟ್ಸನ್ ಫೀಲ್ಡಿಂಗ್ ವೇಳೆ ಮೊಣಕಾಲಿಗೆ ಗಾಯವಾಗಿದೆ. ಆದರೆ ವ್ಯಾಟ್ಸನ್ ಈ ವಿಚಾರ ಬಹಿರಂಗ ಪಡಿಸಿಲ್ಲ. ತಂಡಕ್ಕೆ ಹೋರಾಟ ನೀಡಿದ್ದಾರೆ. ಆದರೆ ಗೆಲುವು ನಮ್ಮದಾಗಲಿಲ್ಲ. ಪಂದ್ಯದ ಬಳಿಕ ವ್ಯಾಟ್ಸನ್ ಮೊಣಕಾಲಿಗೆ 6 ಸ್ಟಿಚ್ ಹಾಕಲಾಗಿದೆ ಎಂದು ಹರ್ಭಜನ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. 

 

 

ಐಪಿಎಲ್ ಟೂರ್ನಿ ಮುಗಿಸಿ ತವರಿಗೆ ವಾಪಾಸ್ಸಾದ ವ್ಯಾಟ್ಸನ್ ಮೊಣಕಾಲಿನ ನೋವಿನಿಂದ ಕುಂಟುತ್ತಲೇ ಏರ್‌ಪೋರ್ಟ್‌ಗೆ ತೆರಳಿದ್ದಾರೆ.