ಮುಂಬೈ(ಸೆ.08): ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಐಪಿಎಲ್ ಟೂರ್ನಿಗೆ ಮಾತ್ರ ಸೀಮಿತವಾಗಿದ್ದಾರೆ. ಟೀಂ ಇಂಡಿಯಾದಿಂದ ದೂರ ಉಳಿದಿರುವ ಭಜ್ಜಿ, ಯುವ ಕ್ರಿಕೆಟಿಗರ ಪ್ರದರ್ಶನದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಈಗಾಗಲೇ ಭಾರತದ ನಂ.4 ಕ್ರಮಾಂಕಕ್ಕೆ ಸಂಜು ಸಾಮ್ಸನ್ ಸೂಕ್ತ ಎಂದಿದ್ದ ಭಜ್ಜಿ, ಇದೀಗ ತಂಡಕ್ಕೆ ಹೊಸ ಸ್ಪಿನ್ನರ್ ಹುಡುಕಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

ದೇಸಿ ಟೂರ್ನಿಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ವಿದರ್ಭ ಸ್ಪಿನ್ನರ್ ಆಕ್ಷಯ್ ವಾಖರೆ ಟೀಂ ಇಂಡಿಯಾಗೆ ಪಾದರ್ಪಣೆ ಮಾಡಲು ಅರ್ಹ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ  ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ರೆಡ್ ಪರ 5 ವಿಕೆಟ್ ಕಬಳಿಸಿದ ಅಕ್ಷಯ್, ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

 

ಇದನ್ನೂ ಓದಿ: ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ಬಾರಿಸಲು ರೆಡಿಯಾಗಿದ್ರಂತೆ ಭಜ್ಜಿ..!

33 ವರ್ಷದ ಅಕ್ಷಯ್ ಕುರಿತು ಆಯ್ಕೆ ಸಮಿತಿ ಗಮನ ಹರಿಸಬೇಕು. ಸ್ಥಿರ ಪ್ರದರ್ಶನ ಮುಖ್ಯ ವಯಸ್ಸಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಅಕ್ಷಯ್ ವಾಖರೆ ಅದ್ಭುತ ಪ್ರತಿಭೆ. ಆದರೆ ಟೀಂ ಇಂಡಿಯಾದಲ್ಲಿ ಸದ್ಯ  ಸ್ಪಿನ್ನರ್‌ಗಳಿಂದ ತುಂಬಿ ಹೋಗಿದ್ದಾರೆ. ರವಿ ಚಂದ್ರನ್ ಅಶ್ವಿನ್ ಹಾಗೂ ರವೀಂದ್ರಲ ಜಡೇಜಾಗೆ ಸ್ಥಾನ ಸಿಗುತ್ತಿಲ್ಲ. ಹೀಗಿರುವಾಗ ಅಕ್ಷಯ್ ವಾಖರೆಯತ್ತ ಆಯ್ಕೆ ಸಮಿತಿ ಮನಸ್ಸು ಮಾಡುತ್ತಾ ಅನ್ನೋದೆ ಈಗಿರುವ ಪ್ರಶ್ನೆ.