ಮುಖ್ಯವಾಗಿ ಆಟಗಾರರ ವೇತನ ಹಾಗೂ ತಂಡಕ್ಕೆ ವೇಗದ ಬೌಲಿಂಗ್ ಕೋಚ್ ಅನ್ನು ಶೀಘ್ರದಲ್ಲಿ ನೇಮಿಸುವಂತೆ ಸಮಿತಿ ಮುಂದೆ ಕುಂಬ್ಳೆ ಹಾಗೂ ಕೊಹ್ಲಿ ಹೇಳಿದ್ದರು.

ನವದೆಹಲಿ(ಮೇ.23): ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಮಾಜಿ ಆಟಗಾರ ಜಹೀರ್ ಖಾನ್ ಅವರನ್ನು ನೇಮಿಸುವಂತೆ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟರ್ ಮೂಲಕ ಸಲಹೆ ನೀಡಿದ್ದಾರೆ.

ಕಳೆದ ಭಾನುವಾರ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿಯೊಂದಿಗೆ ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ತಂಡಕ್ಕಿರುವ ಅಗತ್ಯತೆ ಬಗ್ಗೆ ಚರ್ಚಿಸಿದ್ದರು. ಹಾಗೆ ಹಲವು ಬೇಡಿಕೆಗಳನ್ನು ಇಡಲಾಗಿತ್ತು.

Scroll to load tweet…

ಅದರಲ್ಲಿ ಮುಖ್ಯವಾಗಿ ಆಟಗಾರರ ವೇತನ ಹಾಗೂ ತಂಡಕ್ಕೆ ವೇಗದ ಬೌಲಿಂಗ್ ಕೋಚ್ ಅನ್ನು ಶೀಘ್ರದಲ್ಲಿ ನೇಮಿಸುವಂತೆ ಸಮಿತಿ ಮುಂದೆ ಕುಂಬ್ಳೆ ಹಾಗೂ ಕೊಹ್ಲಿ ಹೇಳಿದ್ದರು.

ಈ ಸಂಬಂಧ ಹರ್ಭಜನ್ ಸಿಂಗ್, ಭಾರತ ತಂಡದ ವೇಗದ ಬೌಲಿಂಗ್ ಕೋಚ್ ಆಗಲು ಜಹೀರ್ ಸೂಕ್ತ ಎಂದು ಟ್ವೀಟ್ ಮಾಡಿದ್ದಾರೆ.