ಸ್ಟುವರ್ಟ್ ಬ್ರಾಡ್ ಎಂದಾಕ್ಷಣ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಕಣ್ಮುಂದೆ ಬರುವುದು 2007ರ ಐಸಿಸಿ ಟಿ20 ವಿಶ್ವಕಪ್.

2007ರ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವಿ ಇಂಗ್ಲೆಂಡ್ ಎದುರು ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಹೌದು ಆ್ಯಂಡ್ರೊ ಫ್ಲಿಂಟಾಫ್ ಮೇಲಿನ ಸಿಟ್ಟನ್ನು ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್'ನಲ್ಲಿ ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿ ಆರ್ಭಟಿಸಿದ್ದರು. ಆ ಪಂದ್ಯವನ್ನು ಯಾರೂ ಮರೆತಿಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆನಪಿನಾಳದಲ್ಲಿ ಸದಾಕಾಲ ಉಳಿದಿರುವ ಸ್ಟುವರ್ಟ್ ಬ್ರಾಡ್'ಗಿಂದು 31ನೇ ಹುಟ್ಟುಹಬ್ಬದ ಸಂಭ್ರಮ.

ಆದರೆ ಅದಕ್ಕಿಂತ ವಿಶೇಷವೆಂದರೆ ಇಂಗ್ಲೆಂಡ್ ಕಂಡ ಅತ್ಯಂತ ಯಶಸ್ವಿ ಬೌಲರ್'ಗಳ ಪೈಕಿ ಸ್ಟುವರ್ಟ್ ಬ್ರಾಡ್ ಕೂಡಾ ಒಬ್ಬರು. ಇಂಗ್ಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (611 ವಿಕೆಟ್; 368 ಟೆಸ್ಟ್, 178 ಏಕದಿನ ಮತ್ತು 65 ಟಿ20 ವಿಕೆಟ್) ಎನ್ನುವ ದಾಖಲೆ ಕೂಡಾ ಬ್ರಾಡ್ ಹೆಸರಿನಲ್ಲಿದೆ. ಬ್ರಾಡ್ ಟೆಸ್ಟ್ ಕ್ರಿಕೆಟ್'ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. ಇದಷ್ಟೇ ಅಲ್ಲದೇ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಆ್ಯಷಸ್ ಸರಣಿಯಲ್ಲಿ 15ರನ್ ನೀಡಿ 8 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಆ್ಯಷಸ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹ್ಯಾಪಿ ಬರ್ತ್ ಡೇ ಸ್ಟುವರ್ಟ್ ಬ್ರಾಡ್...