ಸೌರವ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಕೆಲವು ಆಯ್ದ ಶುಭಾಶಯಗಳು ನಿಮ್ಮ ಮುಂದೆ...
ಬೆಂಗಳೂರು(ಜು.08): 'ಪ್ರಿನ್ಸ್ ಆಫ್ ಕೋಲ್ಕತಾ' ದಾದ, ಬಂಗಾಳದ ಹುಲಿ ಎಂದೆಲ್ಲಾ ಕರೆಯಲ್ಪಡುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇಂದು 45ನೇ ವಸಂತಕ್ಕೆ ಕಾಲಿರಿಸಿದ್ದಾರೆ.
1996ರಲ್ಲಿ ಲಂಡನ್'ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಸೌರವ್ ಗಂಗೂಲಿ ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು.
2000ನೇ ಇಸವಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಗಂಗೂಲಿ ನಾಟ್'ವೆಸ್ಟ್ ಸರಣಿ, 2003ರ ಚಾಂಪಿಯನ್ಸ್ ಟ್ರೋಫಿ, 2003ರ ಏಕದಿನ ವಿಶ್ವಕಪ್'ನಲ್ಲಿ ಟೀಂ ಇಂಡಿಯಾವನ್ನು ಫೈನಲ್'ಗೇರಿಸಿದ್ದು ಸೇರಿದಂತೆ ಅನೇಕ ಸ್ಮರಣೀಯ ಸನ್ನಿವೇಶಕ್ಕೆ ಸೌರವ್ ಸಾಕ್ಷಿಯಾಗಿದ್ದಾರೆ.
ಸೌರವ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಕೆಲವು ಆಯ್ದ ಶುಭಾಶಯಗಳು ನಿಮ್ಮ ಮುಂದೆ...
