ಆಕರ್ಷಕ ಸ್ಕ್ವೇರ್ ಕಚ್, ಕವರ್ ಡ್ರೈವ್'ಗಳ ಮೂಲಕ ದಶಕಗಳ ಕಾಲ ಟೀಂ ಇಂಡಿಯಾದ ಆಪತ್ಭಾಂದವರಾಗಿದ್ದ 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಇಂದು 45ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಕ್ರಿಕೆಟ್ ಜಗತ್ತು ಕಂಡ ಸಭ್ಯ ಕ್ರಿಕೆಟಿಗರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ಆಟಗಾರರಲ್ಲಿ ರಾಹುಲ್ ದ್ರಾವಿಡ್ ಕೂಡಾ ಒಬ್ಬರು. ಆಕರ್ಷಕ ಸ್ಕ್ವೇರ್ ಕಚ್, ಕವರ್ ಡ್ರೈವ್'ಗಳ ಮೂಲಕ ದಶಕಗಳ ಕಾಲ ಟೀಂ ಇಂಡಿಯಾದ ಆಪತ್ಭಾಂದವರಾಗಿದ್ದ 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಇಂದು 45ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಪ್ರಸ್ತುತ ಅಂಡರ್-19 ಹಾಗೂ ಭಾರತ 'ಎ' ತಂಡಕ್ಕೆ ದ್ರಾವಿಡ್ ಕೋಚ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಅಂಡರ್ 19 ತಂಡ ದ್ರಾವಿಡ್ ಮಾರ್ಗದರ್ಶನದಲ್ಲಿ ವಿಶ್ವಕಪ್ ಆಡಲು ನ್ಯೂಜಿಲೆಂಡ್'ಗೆ ತೆರಳಿದೆ. ಇನ್ನು ಯುವ ಕ್ರಿಕೆಟಿಗರಿಗೆ ಕನ್ನಡಿಗ ರಾಹುಲ್ ದ್ರಾವಿಡ್ ತಾಳ್ಮೆ ಹಾಗೂ ಜಂಟಲ್'ಮನ್ ಎಂಬ ವಿಚಾರದಲ್ಲಿ ರೋಲ್ ಮಾಡೆಲ್ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ...
ದ್ರಾವಿಡ್ ಟೀಂ ಇಂಡಿಯಾ ಒಟ್ಟು 164 ಟೆಸ್ಟ್ ಹಾಗೂ 344 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 13,288 ಹಾಗೂ 10,889ರನ್ ಬಾರಿಸಿದ್ದಾರೆ. ದ್ರಾವಿಡ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜರು ಶುಭ ಕೋರಿದ್ದು ಹೀಗೆ...
