ಕ್ರಿಕೆಟ್ ದೇವರೆದುರು ಆಂಜನೇಯನಾದ ಸೆಹ್ವಾಗ್..!

Hanumanji Virender Sehwag poses with Ramji Sachin Tendulkar in epic picture
Highlights

ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ವಿಶ್ವದ ಸ್ಫೋಟಕ ಆರಂಭಿಕ ಜೋಡಿ ಎಲ್ಲವರಿಗೂ ಗೊತ್ತೇ ಇದೆ. ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಉತ್ತಮ ಸ್ನೇಹಿತರಾಗಿರುವ ಈ ಜೋಡಿ ಕ್ರಿಕೆಟ್ ನಿವೃತ್ತಿಯ ಬಳಿಕವೂ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ.

ಬೆಂಗಳೂರು[ಜೂ.11]: ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ವಿಶ್ವದ ಸ್ಫೋಟಕ ಆರಂಭಿಕ ಜೋಡಿ ಎಲ್ಲವರಿಗೂ ಗೊತ್ತೇ ಇದೆ. ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಉತ್ತಮ ಸ್ನೇಹಿತರಾಗಿರುವ ಈ ಜೋಡಿ ಕ್ರಿಕೆಟ್ ನಿವೃತ್ತಿಯ ಬಳಿಕವೂ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರದಲ್ಲಿ ಟ್ವಿಟರ್’ನಲ್ಲಿ ಸದ್ದು ಮಾಡುವ ವಿರೇಂದ್ರ ಸೆಹ್ವಾಗ್ ಈ ಬಾರಿ ರಾಮ-ಹನುಮಂತನ ಭಂಗಿಯ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಸಚಿನ್ ನಿಂತು ನಗುತ್ತಿದ್ದರೆ, ಸೆಹ್ವಾಗ್ ಮಂಡಿಯೂರಿ ಗದೆ ರೀತಿಯ ವಸ್ತು ಹಿಡಿದು ಆಂಜನೇಯನಂತೆ ಫೋಸ್ ನೀಡಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ನಡದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್-ಸೆಹ್ವಾಗ್ ಜೋಡಿ ಸಾಕಷ್ಟು ರೋಚಕ ಮಾಹಿತಿಯನ್ನು ಹಂಚಿಕೊಂಡಿತ್ತು. ಈ ವೇಳೆ ಸಚಿನ್ ಸೆಹ್ವಾಗ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದರು.

loader