ಕೇವಲ ಮೂರು ಟೆಸ್ಟ್ ಪಂದ್ಯವಾಡಿರುವ ಇಮಾಮ್ ಉಲ್ ಹಕ್, ಇನ್ನೂ ಟೆಸ್ಟ್ ಪದಾರ್ಪಣೆ ಮಾಡದ ಫಖರ್ ಜಮಾನ್ ಜತೆಗೆ ಹಫೀಜ್’ಗೂ ಸ್ಥಾನ ಸಿಕ್ಕಿದ್ದು, ಟೆಸ್ಟ್ ಆರಂಭಿಕ ಬ್ಯಾಟ್ಸ್’ಮನ್ ಅಜರ್ ಅಲಿ ಅವರೊಂದಿಗೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರಾಚಿ[ಅ.01]: ಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಗೆ ಪಾಕಿಸ್ತಾನ ತಂಡದ ಅನುಭವಿ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುಎಇನಲ್ಲಿ ಅಕ್ಟೋಬರ್ 07ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ 17 ಆಟಗಾರರನ್ನೊಳಗೊಂಡ ತಂಡದಲ್ಲಿ ಹಫೀಜ್’ಗೆ ಸ್ಥಾನ ಲಭಿಸಿದ್ದು, ದುಬೈ ವಿಮಾನ ಏರಲು ಸಜ್ಜಾಗಿದ್ದಾರೆ. 

ಕೇವಲ ಮೂರು ಟೆಸ್ಟ್ ಪಂದ್ಯವಾಡಿರುವ ಇಮಾಮ್ ಉಲ್ ಹಕ್, ಇನ್ನೂ ಟೆಸ್ಟ್ ಪದಾರ್ಪಣೆ ಮಾಡದ ಫಖರ್ ಜಮಾನ್ ಜತೆಗೆ ಹಫೀಜ್’ಗೂ ಸ್ಥಾನ ಸಿಕ್ಕಿದ್ದು, ಟೆಸ್ಟ್ ಆರಂಭಿಕ ಬ್ಯಾಟ್ಸ್’ಮನ್ ಅಜರ್ ಅಲಿ ಅವರೊಂದಿಗೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

2016ರಲ್ಲಿ ಕಡೆಯ ಟೆಸ್ಟ್ ಪಂದ್ಯವಾಡಿದ್ದ ಹಫೀಜ್ ಆ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲೂ ಸ್ಥಾನ ಪಡೆಯಲು ವಿಫಲವಾಗಿದ್ದರು. ಆದರೆ ದೇಶಿ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಹಫೀಜ್ ಕೊನೆಗೂ ಆಯ್ಕೆ ಸಮಿತಿಯ ಮನಗೆಲ್ಲುವಲ್ಲಿ ಸಫಲವಾಗಿದ್ದಾರೆ.

ಪಾಕಿಸ್ತಾನ ತಂಡ ಹೀಗಿದೆ:
ಅಜರ್ ಅಲಿ, ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಂ, ಅಸಾದ್ ಶಫಿಕ್, ಹ್ಯಾರಿಸ್ ಸೋಹಿಲ್, ಉಸ್ಮಾನ್ ಸಲಾಹುದ್ದೀನ್, ಸರ್ಫರಾಜ್ ಅಹಮ್ಮದ್[ನಾಯಕ ಮತ್ತು ವಿಕೆಟ್ ಕೀಪರ್], ಮೊಹಮ್ಮದ್ ರಿಜ್ವಾನ್, ಫಾಹೀಮ್ ಅಶ್ರಫ್, ಶಾದಾಬ್ ಖಾನ್, ಬಿಲಾಲ್ ಆಸೀಫ್, ಯಾಸೀರ್ ಶಾ, ಮೊಹಮ್ಮದ್ ಅಬ್ಬಾಸ್, ವಹಾಬ್ ರಿಯಾಜ್, ಹಸನ್ ಅಲಿ, ಮೀರ್ ಹಂಜಾ, ಮೊಹಮ್ಮದ್ ಹಫೀಜ್.