ಬಾಬಾನ ಪರಮಾಪ್ತೆ ನೇಪಾಳದಲ್ಲಿ ಇರುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಪೊಲೀಸರು ಹನಿಪ್ರೀತ್'​ಗಾಗಿ ನೇಪಾಳದಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ನೇಪಾಳ(ಸೆ.17): ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರುಮಿತ್ ರಾಮ್ ರಹೀಂನ ಪರಮಾಪ್ತೆ ಹನಿಪ್ರೀತ್ ನೇಪಾಳದಲ್ಲಿ ಇರುವುದು ಪತ್ತೆಯಾಗಿದೆ.

ಅತ್ಯಾಚಾರಿ ಬಾಬಾ ರಾಮ್​ ರಹೀಂ 20 ವರ್ಷ ಜೈಲು ಶಿಕ್ಷೆ ಪ್ರಕಟವಾಗ ಕ್ಷಣದಿಂದ ಹನಿಪ್ರೀತ್ ನಾಪತ್ತೆಯಾಗಿದ್ದಾಳೆ. ಹನಿಪ್ರೀತ್ ಮೇಲೆ ಗುರುಮಿತ್ ರಾಮ್ ರಹೀಂ ಬಾಬಾ ತಪ್ಪಿಸಿಕೊಳ್ಳಲು ಹನಿಪ್ರಿತ್ ಸಂಚು ರೂಪಿಸಿ ಇದಕ್ಕೆ ಸಹಕರಿಸಿದ್ದಳು ಎಂಬ ಆರೋಪ ಆಕೆಯ ಮೇಲಿದೆ. ಹೀಗಾಗಿ ಹನಿಪ್ರೀತ್'ಗಾಗಿ ಹರಿಯಾಣ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಹನಿಪ್ರೀತ್ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಳೆ ಎಂಬ ಮಾಹಿತಿ ಮೇರೆಗೆ ಹರಿಯಾಣ ಪೊಲೀಸರು ನೇಪಾಳ ಗಡಿಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರದ ತನಿಖೆ ನಡೆಸಿದ್ದರು. ಈ ವೇಳೆ ಪಂಜಾಬ್ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ವಾಹನವೊಂದು ಇಂಡೋ-ನೇಪಾಳ ಗಡಿಭಾಗದಲ್ಲಿ ಪತ್ತೆಯಾಗಿದೆ. ಹೀಗಾಗಿ ಬಾಬಾನ ಪರಮಾಪ್ತೆ ನೇಪಾಳದಲ್ಲಿ ಇರುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಪೊಲೀಸರು ಹನಿಪ್ರೀತ್'​ಗಾಗಿ ನೇಪಾಳದಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.