ಸ್ಟಾರ್ ರೈಡರ್'ಗಳಾದ ಸಚಿನ್(9 ಅಂಕ) ಮಹೇಂದ್ರ ರಜಪೂತ್(8 ಅಂಕ) ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮುಂಬೈ(ಅ.24): ರೈಡಿಂಗ್ ಹಾಗೂ ಡಿಫೆಂಡಿಂಗ್'ನಲ್ಲಿ ಅದ್ಭುತ ಪ್ರದರ್ಶನ ತೋರಿದ ಗುಜರಾತ್ ಫಾರ್ಚೂನ್'ಜೈಂಟ್ಸ್ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಚರಣದಲ್ಲಿ ಮೊದಲ ತಂಡವಾಗಿ ಫೈನಲ್'ಗೆ ಲಗ್ಗೆಯಿಟ್ಟಿದೆ. ಇದೀಗ ಸೋತ ಬೆಂಗಾಲ್ ವಾರಿಯರ್ಸ್'ಗೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ 42-17 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ಮೂಡಿಬಂತು. ಮೊದಲ 10 ನಿಮಿಷದಲ್ಲಿ ಗುಜರಾತ್ 7-6 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧ ಮುಕ್ತಾಯದ ವೇಳೆಗೆ ಸುಕೇಶ್ ಪಡೆ ಕೇವಲ 13-10 ಅಂಕಗಳ ಮುನ್ನಡೆ ಸಾಧಿಸಿತ್ತು.

ದ್ವಿವತಿಯಾರ್ಧದಲ್ಲಿ ಸ್ಟಾರ್ ರೈಡರ್ ಸಚಿನ್ ಮಿಂಚಿನ ದಾಳಿ ನಡೆಸುವ ಮೂಲಕ ಆರಂಭದಿಂದಲೇ ತಂಡಕ್ಕೆ ಅಂಕಗಳ ಮುನ್ನಡೆ ತಂದುಕೊಟ್ಟರು. ದ್ವಿತಿಯಾರ್ಧದ ಆರಂಭವಾಗಿ 3ನೇ ನಿಮಿಷದಲ್ಲೇ 20-10 ಅಂಕಗಳೊಂದಿಗೆ 10 ಅಂಕಗಳ ಮುನ್ನಡೆ ಸಾಧಿಸಿದ ಗುಜರಾತ್ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ನಿರಂತರ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದ ಗುಜರಾತ್ ಅಂತಿಮವಾಗಿ 42-17 ಅಂಕಗಳ ಭರ್ಜರಿ ಜಯ ದಾಖಲಿಸಿದೆ.

ಸ್ಟಾರ್ ರೈಡರ್'ಗಳಾದ ಸಚಿನ್(9 ಅಂಕ) ಮಹೇಂದ್ರ ರಜಪೂತ್(8 ಅಂಕ) ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.