ಮೆಗ್ರಾತ್ 124 ಟೆಸ್ಟ್ ಪಂದ್ಯಗಳಲ್ಲಿ 563 ವಿಕೆಟ್ ಕಬಳಿಸಿದ್ದರೆ, 250 ಏಕದಿನ ಪಂದ್ಯಗಳನ್ನಾಡಿ 381 ಬಾರಿ ಬ್ಯಾಟ್ಸ್'ಮನ್'ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.  

ಮುಂಬೈ: ತನ್ನ ವೃತ್ತಿಬದುಕಿನಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಆಗಿ ಪರಿಣಮಿಸಿದ್ದು ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

‘‘ನನ್ನ ತಲೆಮಾರಿನಲ್ಲಿ ವಿಶ್ವ ಕ್ರಿಕೆಟ್‌'ನ ಪ್ರಚಂಡ ತಂಡವೆಂದರೆ ಅದು ಆಸ್ಟ್ರೇಲಿಯಾ. ಕಾಂಗರೂ ಪಡೆಯಲ್ಲಿನ ಪ್ರಭಾವಿ ಬೌಲರ್‌ಗಳಲ್ಲೇ ಅತ್ಯಂತ ಶ್ರೇಷ್ಠ ವೇಗದ ಬೌಲರ್ ಎಂದರೆ ಮೆಗ್ರಾತ್. ಆಫ್ ಸ್ಟಂಪ್‌'ನಲ್ಲಿ ಅವರಷ್ಟು ಪ್ರಭಾವಿಯಾಗಿ ಬೌಲ್ ಮಾಡುವ ಮತ್ತೊಬ್ಬ ಚಾಣಾಕ್ಷ ಬೌಲರ್‌ನನ್ನು ನಾನು ಕಂಡಿಲ್ಲ. ಬೌಲಿಂಗ್‌'ನಲ್ಲಿನ ಅವರ ನಿಖರತೆ ವಿಸ್ಮಯ ತರಿಸುವಂಥದ್ದು. ಬೆಳಗಿನ ಒಂದು ತಾಸಿನ ಅವಧಿಯಲ್ಲಿ ಹಾಗೂ ಮಧ್ಯಾಹ್ನದ ಕಡೇ ಭಾಗ ಇಲ್ಲವೇ ಸಂಜೆಯ ವೇಳೆ ಅವರು ಬ್ಯಾಟ್ಸ್‌'ಮನ್‌ಗಳಿಗೆ ದುಃಸ್ವಪ್ನವಾಗುತ್ತಿದ್ದರು’’ ಎಂದು 164 ಟೆಸ್ಟ್‌ಗಳಿಂದ 13288 ರನ್ ಕಲೆಹಾಕಿರುವ ದ ವಾಲ್ ಖ್ಯಾತಿಯ ದ್ರಾವಿಡ್ ಹೇಳಿದ್ದಾರೆ.

ಗ್ಲೇನ್ ಮೆಗ್ರಾತ್ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಟ ಬೌಲರ್'ಗಳಲ್ಲಿ ಎಂದು ಗುರುತಿಸಿಕೊಂಡಿದ್ದಾರೆ. ಮೆಗ್ರಾತ್ 124 ಟೆಸ್ಟ್ ಪಂದ್ಯಗಳಲ್ಲಿ 563 ವಿಕೆಟ್ ಕಬಳಿಸಿದ್ದರೆ, 250 ಏಕದಿನ ಪಂದ್ಯಗಳನ್ನಾಡಿ 381 ಬಾರಿ ಬ್ಯಾಟ್ಸ್'ಮನ್'ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.