ಗುಡ್ ಬೈ 2018: ಹೊಸ ಬದುಕಿಗೆ ಕಾಲಿಟ್ಟ ಕ್ರೀಡಾ ತಾರೆಯರು!

2018ರಲ್ಲಿ ಹಲವು ಕ್ರೀಡಾ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ಹೊಸ ಬದುಕು ಆರಂಭಿಸಿದ ಪ್ರಮುಖ ಐವರು ಕ್ರೀಡಾ ತಾರೆಯರ ವಿವರ ಇಲ್ಲಿದೆ.
 

Goodbye 2018 sports persons who got married in 2018

ಬೆಂಗಳೂರು(ಡಿ.30): ಹೊಸ ವರ್ಷ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದೆ. ಈ ಗುಂಗಿನಲ್ಲಿ ಈ ವರ್ಷದ(2018) ಮೆಲುಕು ಹಾಕಿದರೆ ಹಲವು ಅವಿಸ್ಮರಣೀಯ ಘಟನೆಗಳು ಕಣ್ಣ ಮುಂದೆ ಹಾಸು ಹೋಗುತ್ತೆ. ಕೆಲ ಕ್ರೀಡಾ ತಾರೆಯರಿಗೆ ಬ್ಯಾಚ್ಯುಲರ್ ಲೈಫ್‌ಗೆ ಫುಲ್ ಸ್ಟಾಪ್ ಇಟ್ಟು ಹೊಸ ಬದುಕಿಗೆ ಕಾಲಿಟ್ಟರು. ಹೀಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐವರು ತಾರೆಯರು ವಿವರ ಇಲ್ಲಿದೆ.

ಸೈನಾ ನೆಹ್ವಾಲ್- ಪರುಪಳ್ಳಿ ಕಶ್ಯಪ್

Goodbye 2018 sports persons who got married in 2018
ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಡಿಸೆಂಬರ್ 14 ರಂದು ಹೈದರಾಬಾದ್‌ನಲ್ಲಿ ಹೊಸ ಬದುಕಿಗೆ ಕಾಲಿಟ್ಟರು. 2005ರಿಂದ ಇವರಿಬ್ಬರು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ಶುರು ಮಾಡಿದ್ದರು. ಆಗಲೇ ಸೈನಾ ಹಾಗೂ ಕಶ್ಯಪ್ ನಡುವೆ ಪ್ರೀತಿ ಚಿಗುರೊಡೆದಿತ್ತು. 

ಸಂಜು ಸಾಮ್ಸನ್ - ಚಾರುಲತಾ

Goodbye 2018 sports persons who got married in 2018
ಟೀಂ ಇಂಡಿಯಾ ಟಿ20 ಕ್ರಿಕೆಟ್ ಪ್ರತಿನಿಧಿಸಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್, ಬಹುಕಾಲದ ಗೆಳತಿ ಚಾರುಲತಾ ಕೈಹಿಡಿದರು. ಡಿಸೆಂಬರ್ 22 ರಂದು ನಡೆದ ವಿವಾಹ ಮಹೋತ್ಸವದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿನೇಶ್ ಪೋಗತ್- ಸೊಮ್‌ವೀರ್ ರಾಥಿ

Goodbye 2018 sports persons who got married in 2018
ಈ ಭಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ರಸ್ಲಿಂಗ್ ಸ್ಟಾರ್ ವಿನೇಶ್ ಪೋಗತ್, ಸೋಮ್‌ವೀರ್ ರಾಥಿಯನ್ನ ಮದುವೆಯಾದರು. ಡಿಸೆಂಬರ್ 13 ರಂದು ಹರಿಯಾಣದಲ್ಲಿ ಈ ಜೋಡಿ ಹೊಸ ಬದುಕಿಗೆ ಕಾಲಿಟ್ಟರು.

ಇಯಾನ್ ಮಾರ್ಗನ್- ತಾರ ರಿಡ್ವ್‌ಗ್ವೇ

Goodbye 2018 sports persons who got married in 2018
ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ತಮ್ಮ ಬಹುಕಾಲದ ಗೆಳತಿ ತಾರ ರಿಡ್ವ್‌ಗ್ವೇ ಯನ್ನ ಮದುವೆಯಾದರು. ಆಸ್ಟ್ರೇಲಿಯಾ ಮೂಲದ ತಾರ ರಿಡ್ವ್‌ಗ್ವೇ 2010ರಲ್ಲಿ ಮಾರ್ಗನ್ ಮೊದಲ ಬಾರಿಗೆ ಬೇಟಿಯಾಗಿದ್ದರು. ಬಳಿಕ ಇವರ ಪ್ರೀತಿ ಆರಂಭಗೊಂಡಿತು. 

ಸೆಸ್ಕ್ ಫ್ಯಾಬ್ರೆಗಾಸ್- ಡೆನಿಯಲ್ ಸೆಮಾನ್

Goodbye 2018 sports persons who got married in 2018Goodbye 2018 sports persons who got married in 2018
ಚೆಲ್ಸಾ ತಂಡದ ಸ್ಟಾರ್ ಫುಟ್ಬಾಲರ್, ಸ್ಪಾನಿಶ್ ಮೂಲದ ಸೆಸ್ಕ್ ಫ್ಯಾಬ್ರೆಗಾಸ್ ಮೇ ತಿಂಗಳಲ್ಲಿ ಬಹುಕಾಲದ ಗೆಳತಿ ಡೆನಿಯಲ್ ಸೆಮಾನ್ ಕೈಹಿಡಿದರು. ವಿಶೇಷ ಅಂದರೆ ಪತ್ನಿ ಸೆಮಾನ್, ಸೆಸ್ಕ್ ಫ್ಯಾಬ್ರೆಗಾಸ್‌ಗಿಂತ 12 ವರ್ಷಕ್ಕಿಂತ ದೊಡ್ಡವರು. ಸೆಮಾನ್ ವಯಸ್ಸು 42.

Latest Videos
Follow Us:
Download App:
  • android
  • ios