Asianet Suvarna News Asianet Suvarna News

ಸೇಡು ತೀರಿಸಿಕೊಳ್ಳಲು ಪಾಕ್'ಗಿದು ಸುವರ್ಣವಕಾಶ

ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 124ರನ್'ಗಳ ಹೀನಾಯ ಸೋಲು ಕಾಣುವ ಮೂಲಕ ಪಾಕ್ ಭಾರೀ ಮುಖಭಂಗಕ್ಕೆ ಗುರಿಯಾಗಿತ್ತು.

Golden opportunity for Pakistan to avenge loss to India
  • Facebook
  • Twitter
  • Whatsapp

ಕರಾಚಿ(ಜೂ.17): ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲುಂಡಿದ್ದ ಪಾಕಿಸ್ತಾನಕ್ಕೆ ಈಗ ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶ ಬಂದೊದಗಿದೆ ಎಂದು ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್‌ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 124ರನ್'ಗಳ ಹೀನಾಯ ಸೋಲು ಕಾಣುವ ಮೂಲಕ ಪಾಕ್ ಭಾರೀ ಮುಖಭಂಗಕ್ಕೆ ಗುರಿಯಾಗಿತ್ತು.

ಇದೀಗ ತನ್ನ ಮರ್ಯಾದೆಯನ್ನು ಮರು ಸಂಪಾದಿಸಲು ಪಾಕ್‌'ಗೆ ಇದು ಒಳ್ಳೆಯ ಅವಕಾಶವಾಗಿದೆ ಎಂದು ಪಾಕ್‌'ನ ಸಮ್ಮಾ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ನಿಜಕ್ಕೂ ಶೋಚನೀಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಪಾಕ್ ಆಟಗಾರರು ಸಾಕಷ್ಟು ಎಡವಟ್ಟುಗಳನ್ನು ಮಾಡಿದ್ದರು. ಆದರೆ ಫೈನಲ್‌'ನಲ್ಲಿ ನಮ್ಮ ಆಟಗಾರರು ತಪ್ಪುಗಳನ್ನು ಮರುಕಳಿಸದಂತೆ ಎಚ್ಚರವಹಿಸಲಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು.

Follow Us:
Download App:
  • android
  • ios