ಈ ಹಿಂದೆ 2013ರಲ್ಲಿ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ, ಆತಿಥೇಯ ಭಾರತ ಎದುರು ವೈಟ್‌'ವಾಶ್‌'ಗೆ ಗುರಿಯಾಗಿತ್ತು. ಹೀಗಾಗಿ 2017ರಲ್ಲಿನ ಟೂರ್ನಿಯಲ್ಲಿ ಇದು ಮರುಕಳಿಸದಿರಲಿ ಎಂದು ಮೆಗ್ರಾತ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ.

ಸಿಡ್ನಿ(ಡಿ.09): ಮುಂದಿನ ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ಗಳಿಗೆ, ಆಸೀಸ್‌ನ ಮಾಜಿ ವೇಗಿ ಗ್ಲೇನ್ ಮೆಗ್ರಾತ್ ಸಲಹೆ ನೀಡಲಿದ್ದಾರಂತೆ.

ಈ ಹಿಂದೆ 2013ರಲ್ಲಿ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ, ಆತಿಥೇಯ ಭಾರತ ಎದುರು ವೈಟ್‌'ವಾಶ್‌'ಗೆ ಗುರಿಯಾಗಿತ್ತು. ಹೀಗಾಗಿ 2017ರಲ್ಲಿನ ಟೂರ್ನಿಯಲ್ಲಿ ಇದು ಮರುಕಳಿಸದಿರಲಿ ಎಂದು ಮೆಗ್ರಾತ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ ಅಲ್ಲದೇ ಮೆಗ್ರಾತ್, ಭಾರತ ಪಿಚ್‌ಗಳ ಬಗ್ಗೆ ಅರಿತಿದ್ದಾರೆ.

ವರ್ಷದಲ್ಲಿ ಆರು ವಾರಗಳ ಕಾಲ ನಾನು ಭಾರತದಲ್ಲಿ ಎಂಆರ್'ಎಫ್ ಪೇಸ್ ಪೌಂಡೇಶನ್'ನಲ್ಲಿ ಕೆಲಸ ಮಾಡುವುದರಿಂದ, ಭಾರತದ ಪಿಚ್'ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಾಯವಾಗಿದೆ ಎಂದು ಮಾಜಿ ವೇಗಿ ಗ್ಲೇನ್ ಮೆಗ್ರಾತ್ ಹೇಳಿದ್ದಾರೆ.

ಇದಕ್ಕಾಗಿಯೇ ಅನುಭವಿ ಮೆಗ್ರಾತ್ ಅವರನ್ನು ಬಳಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.