ಲಂಡನ್[ಜ.01]: ಜರ್ಮನಿಯ ನಂ.1 ಮತ್ತು ವಿಶ್ವದ ಅತ್ಯುತ್ತಮ ಫುಟ್ಬಾಲ್ ಕ್ಲಬ್ ಬೆಯರ್ನ್ ಮ್ಯೂನಿಕ್ ಎಫ್‌ಸಿ, ತನ್ನ ಭಾರತದ ಅಭಿಮಾನಿಗಳಿಗೆ ಕನ್ನಡದಲ್ಲಿ ‘ಧನ್ಯವಾದ’ ಹೇಳಿದೆ. 

2018ರಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ಲಬ್‌ನ್ನು ಭಾರತದ ಅಭಿಮಾನಿಗಳು ಬೆಂಬಲಿಸಿದ್ದರು. ಇದರಿಂದಾಗಿ ಕ್ಲಬ್ ತನ್ನ ಪೋಸ್ಟ್‌ನಲ್ಲಿ ಭಾರತೀಯರಿಗೆ ಶುಭ ಕೋರಿದೆ.

ಹೊಸ ವರ್ಷಕ್ಕೂ ಮುನ್ನ ಕನ್ನಡಿಗರಿಗೆ ಬೆಯರ್ನ್ ಮ್ಯೂನಿಕ್ ಎಫ್‌ಸಿ ಅಚ್ಚರಿ ನೀಡಿದ್ದು,  ಅಂತರಾಷ್ಟ್ರೀಯ ಫುಟ್ಬಾಲ್ ಕ್ಲಬ್‌ವೊಂದು ಕನ್ನಡದಲ್ಲಿ ಶುಭ ಕೋರಿದ್ದು ಇದೇ ಮೊದಲು.