ಮುಂಬರುವ ಆವೃತ್ತಿಯಲ್ಲಿ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕರಾಚಿ ಕಿಂಗ್ಸ್ ತಂಡದ ನಾಯಕರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕರಾಚಿ(ಅ.06): ವೆಸ್ಟ್ ಇಂಡಿಸ್ ಸ್ಫೋಟಕ ಬ್ಯಾಟ್ಸ್'ಮನ್'ಗಳಾದ ಕ್ರಿಸ್ ಗೇಲ್, ಕಿರಾನ್ ಪೊಲ್ಲಾರ್ಡ್, ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಕುಮಾರ್ ಸಂಗಾಕ್ಕರ ಅವರನ್ನು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಪ್ರಾಂಚೈಸಿಗಳು ತಂಡದಿಂದ ಬಿಡುಗಡೆಗೊಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಗೇಲ್ ಹಾಗೂ ತಂಡದ ನಾಯಕರಾಗಿದ್ದ ಸಂಗಾಕ್ಕರ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹಾಗೆಯೇ ಕೆರಿಬಿಯನ್ ಆಲ್ರೌಂಡರ್ ಕಿರಾನ್ ಪೊಲ್ಲಾರ್ಡ್ ಅವರನ್ನು ಕರಾಚಿ ಕಿಂಗ್ಸ್ ಪ್ರಾಂಚೈಸಿ ತಂಡದಿಂದ ಬಿಡುಗಡೆಗೊಳಿಸಿದೆ.

ಮುಂಬರುವ ಆವೃತ್ತಿಯಲ್ಲಿ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕರಾಚಿ ಕಿಂಗ್ಸ್ ತಂಡದ ನಾಯಕರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.