Asianet Suvarna News Asianet Suvarna News

ಸೆಂಚುರಿ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ಗೆ ಕ್ರಿಸ್ ಗೇಲ್ ವಿದಾಯ!

ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೈಬಿಟ್ಟ ಬೆನ್ನಲ್ಲೇ, ಕ್ರಿಸ್ ಗೇಲ್ ಲಿಸ್ಟ್ ಎ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಂತಿಮ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಗೇಲ್ ಗುಡ್ ಬೈ ಹೇಳಿದ್ದಾರೆ.

Gayle Retires From Jamaica List-A Career After Scoring A Century
Author
Bengaluru, First Published Oct 9, 2018, 9:26 AM IST

ಕಿಂಗ್ಸ್‌ಟೌನ್(ಅ.09) : ವಿಂಡೀಸ್ ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಭರ್ಜರಿ ಶತಕ ಬಾರಿಸುವುದರೊಂದಿಗೆ ಲಿಸ್ಟ್ ‘ಎ’ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಾದ ರಿಜನಲ್ ಸೂಪರ್ 50 ಕ್ಲಾಶ್ ಟೂರ್ನಿಯಲ್ಲಿ ಜಮೈಕಾ ತಂಡದ ಪರ ಆಡಿದ ಗೇಲ್, ಬಾರ್ಬಡೋಸ್ ವಿರುದ್ಧ ಶತಕ ಬಾರಿಸಿದರು. 

39 ವರ್ಷದ ಗೇಲ್, ತಮ್ಮ ಅಂತಿಮ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು. ಕೊನೆಯ ದೇಶಿಯ ಪಂದ್ಯದಲ್ಲಿ ಗೇಲ್ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಕ್ರಿಸ್ ಗೇಲ್ ಈವರೆಗೂ 356 ಲಿಸ್ಟ್ ‘ಎ’ ಪಂದ್ಯಗಳನ್ನಾಡಿದ್ದು, 12,436 ರನ್ ಗಳಿಸಿದ್ದಾರೆ. ‘ನನ್ನ ಲಿಸ್ಟ್ ‘ಎ’ ಕ್ರಿಕೆಟ್‌ನ ಅಂತಿಮ ಪಂದ್ಯದಲ್ಲಿ ಶತಕ ಬಾರಿಸುವುದು ಅತ್ಯಂತ ಸಂತಸದ ಸಂಗತಿಯಾಗಿದೆ.

ಜತೆಗೆ ದೇಶವನ್ನು ಪ್ರತಿನಿಧಿಸುವುದು ಮತ್ತು ನಾಯಕತ್ವ ವಹಿಸುವುದು ತೃಪ್ತಿಕರ ತಂದಿದೆ ಎಂದು ಗೇಲ್ ಹೇಳಿದರು. ಕೊನೆಯ ಪಂದ್ಯದಲ್ಲಿ ಜಮೈಕಾ ತಂಡದ
ನಾಯಕತ್ವ ನೀಡಿದ್ದಕ್ಕೆ ಮತ್ತು ನನಗೆ ಸಹಕರಿಸಿದ ತಂಡದ ಎಲ್ಲ ಸದಸ್ಯರಿಗೂ ಧನ್ಯವಾದ ಎಂದು ಗೇಲ್ ಹರ್ಷ ವ್ಯಕ್ತಪಡಿಸಿದರು. 
 

Follow Us:
Download App:
  • android
  • ios