ಧೋನಿ ಆರ್ಭಟ ನೋಡಿ ಭಯವಾಯಿತು| ಇದು ಕ್ಯಾಪ್ಟನ್ ಕೊಹ್ಲಿ ಮಾತು

ಬೆಂಗಳೂರು[ಏ.23]: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂ.ಎಸ್‌.ಧೋನಿ ಬ್ಯಾಟ್‌ ಮಾಡಿದ ರೀತಿ ಭಯ ಹುಟ್ಟಿಸಿತು ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ 1 ರನ್‌ ಸೋಲು ಅನುಭವಿಸಿತು. ಧೋನಿ 48 ಎಸೆತಗಳಲ್ಲಿ 84 ರನ್‌ ಗಳಿಸಿ ಅಜೇಯರಾಗಿ ಉಳಿದರು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ‘ಧೋನಿ ತಾವು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೂ ಅದೇ ರೀತಿ ಆಡಿದರು. ಅವರ ಆರ್ಭಟ ನಮ್ಮಲ್ಲಿ ಭಾರಿ ಭಯ ಹುಟ್ಟಿಸಿತು. ಪಂದ್ಯ ಆ ರೀತಿ ಮುಕ್ತಾಯಗೊಳ್ಳಲಿದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.

ಇನ್ನು ಭಾನುವಾರ ನಡೆದಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಗೆಲುವು ಸಾಧಿಸಿತ್ತಾದರೂ ಚೆನ್ನೈ ತಂಡದ ನಾಯಕ ಧೋನಿ ಕೊನೆಯ ಓವರ್ ನಲ್ಲಿ ಆಡಿದ ಪರಿ ಎ್ಲಲರ ಹೃದಯ ಗೆದ್ದಿತ್ತು.