10ನೇ ಐಪಿಎಲ್ ಆವೃತ್ತಿಯಲ್ಲಿ ಎರಡನೇ ಗರಿಷ್ಟ ರನ್ ದಾಖಲಿಸಿದರೂ ಗೌತಮ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನಪಡೆಯಲು ವಿಫಲರಾಗಿದ್ದಾರೆ.

ನವದೆಹಲಿ(ಮೇ.23): ಮುಂದಿನ ತಿಂಗಳು ಇಂಗ್ಲೆಂಡ್'ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗೌತಮ್ ಗಂಭೀರ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುತ್ತಿರುವ ತನ್ನ ಸಹಪಾಠಿ ಶಿಖರ್ ಧವನ್'ಗೆ ಶುಭಕೋರಿದ್ದಾರೆ.

ಐಪಿಎಲ್'ನಲ್ಲಿ ಅದ್ಭುತ ಪ್ರದರ್ಶನ ಫ್ಯಾಬ್ ಸ್ಟೈಲೀಶ್ ಅವಾರ್ಡ್ ಪ್ರಶಸ್ತಿ ಗೆದ್ದುಕೊಂಡ ಕೆಕೆಆರ್ ನಾಯಕ ಗೌತಮ್ ಗಂಭೀರ್ ಅವರಿಗೆ ಮೊದಲು ಶಿಖರ್ ಧವನ್ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಗಂಭೀರ್ ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಸ್ಥಾನ ಪಡೆದ ಶಿಖರ್ ಧವನ್'ಗೆ ಶುಭ ಕೋರಿದ್ದಾರೆ.

10ನೇ ಐಪಿಎಲ್ ಆವೃತ್ತಿಯಲ್ಲಿ ಎರಡನೇ ಗರಿಷ್ಟ ರನ್ ದಾಖಲಿಸಿದರೂ ಗೌತಮ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನಪಡೆಯಲು ವಿಫಲರಾಗಿದ್ದಾರೆ.

ಹೀಗಿತ್ತು ಧವನ್-ಗಂಭೀರ್ ನಡೆಸಿದ ಟ್ವೀಟ್'ಗಳು...

Scroll to load tweet…