ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ ಪ್ರಸ್ತುತ ಕೊಲ್ಕತಾ ನೈಟ್'ರೈಡರ್ಸ್ ತಂಡದ ನಾಯಕರಾಗಿರುವ ಗಂಭೀರ್, 2012 ಮತ್ತು 2014ರಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ನವದೆಹಲಿ(ಜೂ.22): ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಪತ್ನಿ ನತಾಶಾ 2ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮವನ್ನು ಗಂಭೀರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
2011ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಗಂಭೀರ್‌ಗೆ ಈಗಾಗಲೇ ಅಜೇನಾ ಎಂಬ ಮಗಳಿದ್ದು, ಇದೀಗ ಮತ್ತೊಂದು ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ.
ಗಂಭೀರ್ ಅವರ ಹಿರಿಯ ಪುತ್ರಿ, ತನ್ನ ಪುಟ್ಟ ತಂಗಿಯನ್ನು ಮಡಲಲ್ಲಿ ಮಲಗಿಸಿಕೊಂಡು ಆಡಿಸುತ್ತಿರುವ ಫೋಟೊವನ್ನು ಗೌತಿ ಟ್ವೀಟ್ ಮಾಡಿದ್ದು, ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ ಪ್ರಸ್ತುತ ಕೊಲ್ಕತಾ ನೈಟ್'ರೈಡರ್ಸ್ ತಂಡದ ನಾಯಕರಾಗಿರುವ ಗಂಭೀರ್, 2012 ಮತ್ತು 2014ರಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.