ಡೆಲ್ಲಿ ಡೇರ್'ಡೆವಿಲ್ಸ್ ನಾಯಕತ್ವ ವಹಿಸಿಕೊಂಡ ಗಂಭೀರ್

First Published 7, Mar 2018, 6:09 PM IST
Gautam Gambhir returns to Delhi Daredevils as captain
Highlights

2010ರ ಬಳಿಕ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ತೊರೆದ ಗೌತಿ, ಆ ಬಳಿಕ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಮುನ್ನಡಿಸಿದ್ದರು. 7 ವರ್ಷಗಳ ಕಾಲ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಗೌತಿ ಎರಡು ಬಾರಿ ತಂಡವನ್ನು ಚಾಂಪಿಯನ್ ಆಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನವದೆಹಲಿ(ಮಾ.07): ತವರು ತಂಡಕ್ಕೆ ವಾಪಾಸಾಗಿರುವ ಗೌತಮ್ ಗಂಭೀರ್ ನಿರೀಕ್ಷೆಯಂತೆಯೇ ಡೆಲ್ಲಿ ಡೇರ್'ಡೆವಿಲ್ಸ್ ತಂಡದ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

'ಡೆಲ್ಲಿ ತಂಡಕ್ಕೆ ಮತ್ತೊಮ್ಮೆ ನಾಯಕರಾಗುತ್ತಿರುವ ಗೌರವದ ಸಂಗತಿಯಾಗಿದೆ' ಎಂದು ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದೆ. ಇದೇ ಜನವರಿಯಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಪ್ರಾಂಚೈಸಿಯು ಗಂಭೀರ್ ಅವರನ್ನು 2.8 ಕೋಟಿ ನೀಡಿ ಖರೀದಿಸಿತ್ತು. ಈ ಬಾರಿ ನಮ್ಮ ತಂಡ ಸಮತೋಲನದಿಂದ ಕೂಡಿದ್ದು, ರಿಕಿ ಪಾಂಟಿಂಗ್ ಅವರಂತಹ ಚಾಂಪಿಯನ್ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸಲು ಎದುರು ನೋಡುತತ್ತಿದ್ದೇನೆ ಎಂದು ಹೇಳಿದ್ದಾರೆ.

2010ರ ಬಳಿಕ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ತೊರೆದ ಗೌತಿ, ಆ ಬಳಿಕ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಮುನ್ನಡಿಸಿದ್ದರು. 7 ವರ್ಷಗಳ ಕಾಲ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಗೌತಿ ಎರಡು ಬಾರಿ ತಂಡವನ್ನು ಚಾಂಪಿಯನ್ ಆಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಐಪಿಎಲ್ ವೇಳೆ, ನನ್ನ ಹೃದಯದಲ್ಲಿ ಡೆಲ್ಲಿ ಈಗಲೂ ತುಡಿಯುತ್ತಿದೆ. ನಾನು ಮೂರು ವರ್ಷಗಳ ಕಾಲ ಡೆಲ್ಲಿ ಪರವಾಗಿ ಐಪಿಎಲ್'ನಲ್ಲಿ ಆಡಿದ್ದೇನೆ ಎಂದು ಎಡಗೈ ಬ್ಯಾಟ್ಸ್'ಮನ್ ಹೇಳಿದ್ದರು.

loader