ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!
ತಂದೆಯ ಚಿಕಿತ್ಸೆಗೆ ಸಹಾಯ ಮಾಡಿ ಎಂಬ ಮನವಿಗೆ ಗೌತಮ್ ಗಂಭೀರ್ ಸ್ಪಂದಿಸಿದ್ದಾರೆ. ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವಂತೆ ಯುವಿಗೆ ಮನವಿ ಮಾಡಿದ್ದಾಳೆ.
ನವದೆಹಲಿ(ಸೆ.16): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಶಾಸಕ ಗೌತಮ್ ಗಂಭೀರ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ನೆರವು ಕೇಳಿದವರಿಗೆ ಗಂಭೀರ್ ತಕ್ಷಣ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ತಂದೆಯ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಯುವತಿಯ ಮನವಿಗೆ ಗಂಭೀರ್ ಸ್ಪಂದಿಸಿದ್ದಾರೆ. ಈ ಮೂಲಕ ಮತ್ತೆ ಗಂಭೀರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇದನ್ನೂ ಓದಿ: ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!
ಉನ್ನತಿ ಮದನ್ ಅನ್ನೋ ಯುವತಿ, ಸರಣಿ ಟ್ವೀಟ್ ಮೂಲಕ ಗಂಭೀರ್ ಬಳಿ ಸಹಾಯ ಯಾಚಿಸಿದ್ದಳು. ತನ್ನ ತಂದೆಯನ್ನು ಚಿಕಿತ್ಸೆಗೆಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದೆ. ಆದರೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಅನ್ನೋ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ್ದಾರೆ. ಇತರ ಹಲವು ಸರ್ಕಾರಿ ಆಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಹೋಗಿದ್ದೇನೆ. ಆದರೆ ಯಾರೂ ಕೂಡ ಚಿಕಿತ್ಸೆ ನೀಡುತ್ತಿಲ್ಲ. ತಂದೆಗೆ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಗಂಭೀರ್ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ
ಬಳಿಕ ತಂದೆಯ ಚಿಕಿತ್ಸೆ ನಿಲ್ಲಿಸಲಾಗಿದೆ. ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನನ್ನಲ್ಲಿ ಹಣವಿಲ್ಲ. ತಂದೆಗೆ ನಾನು ಮತ್ತು ನನ್ನ 11 ವರ್ಷದ ತಮ್ಮ ಇಬ್ಬರೆ ಊರುಗೋಲು. ಗಂಭೀರ್ ನನಗೆ ಸಹಾಯ ಮಾಡಿ. ಏಮ್ಸ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದಳು.
ಯುವಿಯ ಮನವಿ ನೋಡಿದ ಗಂಭೀರ್, ಟ್ವೀಟ್ ಮೂಲಕ ತಕ್ಷಣವೇ ನಿಮ್ಮ ದೂರವಾಣಿ ಸಂಖ್ಯೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಉನ್ನತಿ ತನ್ನ ಮೊಬೈಲ್ ನಂಬರ್ ಟ್ವೀಟ್ ಮೂಲಕ ನೀಡಿದ್ದಾರೆ. ಇದೀಗ ಉನ್ನತಿ ತಂದೆ ಶೀಘ್ರವೇ ಚೇತರಿಸಿಕೊಳ್ಳಲಿ ಅನ್ನೋ ಪ್ರಾರ್ಥನೆಗಳು ಟ್ವಿಟರ್ ಮೂಲಕ ಬರುತ್ತಿವೆ.