Asianet Suvarna News Asianet Suvarna News

ಆಸ್ಟ್ರೇಲಿಯನ್ನರನ್ನು ಹೊಗಳಿದ ಗಂಭೀರ್!

"ಆಸ್ಟ್ರೇಲಿಯಾ ಅತ್ಯುತ್ತಮ ಆಟದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ"

Gautam Gambhir praises Australia for proving critics wrong
  • Facebook
  • Twitter
  • Whatsapp

ನವದೆಹಲಿ(ಮಾ.22): ಭಾರತೀಯ ಪಿಚ್‌'ಗಳಲ್ಲಿ ಆತಿಥೇಯ ತಂಡವನ್ನು ಒತ್ತಡಕ್ಕೆ ಸಿಲುಕಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ತಕ್ಕ ಗೌರವ ಸಲ್ಲಬೇಕು ಎಂದು ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

‘‘ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಆಸ್ಟ್ರೇಲಿಯಾ ಅತ್ಯುತ್ತಮ ಆಟದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಿಶ್ವದ ಎರಡು ಶ್ರೇಷ್ಠ ತಂಡಗಳ ನಡುವೆ ಈ ರೀತಿಯ ಪೈಪೋಟಿ, ಆಟದ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ’’ ಎಂದು ದೆಹಲಿ ಮೂಲದ ಆಟಗಾರ ಗಂಭೀರ್ ಹೇಳುವ ಮೂಲಕ ಆಸೀಸ್ ಆಟಗಾರರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಸ್ಲೆಡ್ಜಿಂಗ್ ಕ್ರೀಡೆಯ ಒಂದು ಭಾಗವಾಗಿದ್ದು, ಅದು ತನ್ನ ಮಿತಿಯನ್ನು ಮೀರಬಾರದಷ್ಟೆ ಎಂದು 35 ವರ್ಷದ ಎಡಗೈ ಬ್ಯಾಟ್ಸ್'ಮನ್ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios