ವೇತನಕ್ಕೆ ಬಂಡಾಯ ಎದ್ದಿದ್ದಕ್ಕೆ ಸ್ಮಿತ್, ವಾರ್ನರ್‌ಗೆ ನಿಷೇಧ ಶಿಕ್ಷೆ : ಗಂಭೀರ್ ಶಾಕಿಂಗ್ ಹೇಳಿಕೆ

First Published 30, Mar 2018, 1:34 PM IST
Gambhir Shocking Statment about Smith
Highlights

‘ಕ್ರಿಕೆಟ್ ಆಟ ಭ್ರಷ್ಟಾಚಾರ ಮುಕ್ತವಾಗಬೇಕು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಂಡಿರುವ ಕ್ರಮ ಅಗತ್ಯಕ್ಕಿಂತ ಹೆಚ್ಚು ಕಠಿಣವೆನಿಸುತ್ತಿದೆ. ವಾರ್ನರ್ ಹಾಗೂ ಸ್ಮಿತ್ ತಮ್ಮ ಕ್ರಿಕೆಟ್ ಸಂಸ್ಥೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ರೀತಿ ಬೆಲೆ ತೆರುತ್ತಿದ್ದಾರೆಯೇ. ಧ್ವನಿ ಎತ್ತುವವರನ್ನು ಬಗ್ಗಿಸುವುದು ಕ್ರಿಕೆಟ್ ಆಡಳಿತದಲ್ಲಿ ಹೊಸದೇನಲ್ಲ.

ನವದೆಹಲಿ(ಮಾ.30): ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಂಡ ಕ್ರಮಕ್ಕೆ ಗೌತಮ್ ಗಂಭೀರ್ ಹೊಸ ಆಯಾಮ ನೀಡಿದ್ದಾರೆ. ವೇತನ ಹೆಚ್ಚಳ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಬಂಡಾಯವೆದ್ದಿದ್ದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಿರುದ್ಧ, ಜೇಮ್ಸ್ ಸುದರ್‌ಲೆಂಡ್ ಹಾಗೂ ಕ್ರಿಕೆಟ್ ಸಮಿತಿಯ ಇನ್ನಿತರ ಮುಖ್ಯಸ್ಥರು ನಿಷೇಧ ಹೇರುವ ಮೂಲಕ ಸೇಡು ತೀರಿಸಿಕೊಂಡಿದ್ದಾರಾ ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

‘ಕ್ರಿಕೆಟ್ ಆಟ ಭ್ರಷ್ಟಾಚಾರ ಮುಕ್ತವಾಗಬೇಕು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಂಡಿರುವ ಕ್ರಮ ಅಗತ್ಯಕ್ಕಿಂತ ಹೆಚ್ಚು ಕಠಿಣವೆನಿಸುತ್ತಿದೆ. ವಾರ್ನರ್ ಹಾಗೂ ಸ್ಮಿತ್ ತಮ್ಮ ಕ್ರಿಕೆಟ್ ಸಂಸ್ಥೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ರೀತಿ ಬೆಲೆ ತೆರುತ್ತಿದ್ದಾರೆಯೇ. ಧ್ವನಿ ಎತ್ತುವವರನ್ನು ಬಗ್ಗಿಸುವುದು ಕ್ರಿಕೆಟ್ ಆಡಳಿತದಲ್ಲಿ ಹೊಸದೇನಲ್ಲ. ಇಯಾನ್ ಚಾಪೆಲ್ ಇದಕ್ಕೆ ಉತ್ತಮ ಉದಾಹರಣೆ’

ಎಂದು ಗಂಭೀರ್ ಟ್ವೀಟರ್‌ನಲ್ಲಿ ಬರೆದಿದ್ದಾರೆ. ಸ್ಮಿತ್‌ರನ್ನು ಮೋಸಗಾರ ಎಂದು ಕರೆಯಲು ಸಾಧ್ಯವಿಲ್ಲ, ಬದಲಾಗಿ ಗೆಲ್ಲಲೇಬೇಕು ಎಂಬ ಛಲ ಹೊಂದಿರುವ ನಾಯಕನೆಂದು ಬಣ್ಣಿಸಬಹುದು ಎಂದು ಗಂಭೀರ್ ಅಭಿಪ್ರಾಯಿಸಿದ್ದಾರೆ. ಸ್ಮಿತ್ ಹಾಗೂ ಮತ್ತಿಬ್ಬರು ಆಟಗಾರರ ಕುಟುಂಬಗಳ ಬಗ್ಗೆ ಯೋಚಿಸಿ ಎಂದು ಮಾಧ್ಯಮಗಳು ಹಾಗೂ ಸಾರ್ವಜನಿಕರಲ್ಲಿ ಗಂಭೀರ್ ಮನವಿ ಮಾಡಿದ್ದಾರೆ.

loader