ಬ್ಯಾಟಿಂಗ್'ನಲ್ಲಿ ಬಲಿಷ್ಟವಾಗಿರುವ ಆರ್'ಸಿಬಿ ಸರಿಯಾದ ಬೌಲಿಂಗ್ ಕಾಂಬಿನೇಷನ್'ಗಾಗಿ ಹೆಣಗಾಡುತ್ತಿತ್ತು. ಹಾಗಾಗಿ ಮಿಲ್ಸ್ ಅವರನ್ನು 12 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಬೆಂಗಳೂರು(ಫೆ.20): ಈ ಬಾರಿಯಾದರೂ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿಯುವ ನಿರೀಕ್ಷೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಕೋಟಿ ರೂಪಾಯಿಗೆ ಇಂಗ್ಲೆಂಡ್ ಬೌಲರ್ ಟೈಮಲ್ ಮಿಲ್ಸ್ ಅವರನ್ನು ಖರೀದಿಸಿದೆ.
ಬ್ಯಾಟಿಂಗ್'ನಲ್ಲಿ ಬಲಿಷ್ಟವಾಗಿರುವ ಆರ್'ಸಿಬಿ ಸರಿಯಾದ ಬೌಲಿಂಗ್ ಕಾಂಬಿನೇಷನ್'ಗಾಗಿ ಹೆಣಗಾಡುತ್ತಿತ್ತು. ಹಾಗಾಗಿ ಮಿಲ್ಸ್ ಅವರನ್ನು 12 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇದರ ಜೊತೆಗೆ ಆಲ್ರೌಂಡರ್ ಪವನ್ ನೇಗಿ(1 ಕೋಟಿ), ಎಡಗೈ ವೇಗಿ ಅಂಕಿತ್ ಚೌಧರಿ(2 ಕೋಟಿ), ಕರ್ನಾಟಕದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ(10 ಲಕ್ಷ), ಆಸ್ಟ್ರೇಲಿಯಾದ ವೇಗದ ಬೌಲರ್ ಬಿಲ್ಲಿ ಸ್ಟಾನ್'ಲೇಕ್(30 ಲಕ್ಷ) ನೀಡಿ ಖರೀದಿಸಿದೆ.
ತಂಡದಲ್ಲಿರುವ ಆಟಗಾರರು:
ವಿರಾಟ್ ಕೊಹ್ಲಿ(ನಾ), ಕೆ.ಎಲ್ ರಾಹುಲ್, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್, ಮನ್ದೀಪ್ ಸಿಂಗ್, ಆ್ಯಡಂ ಮಿಲ್ನೆ, ಸರ್ಫ್ರಾಜ್ ಖಾನ್, ಎಸ್. ಅರವಿಂದ್, ಕೇದಾರ್ ಜಾಧವ್, ಶೇನ್ ವ್ಯಾಟ್ಸನ್, ಸ್ಟುವರ್ಟ್ ಬಿನ್ನಿ, ಸಾಮ್ಯಯಲ್ ಬದ್ರಿ, ಇಕ್ಬಾಲ್ ಅಬ್ದುಲ್ಲಾ, ಟ್ರಿವೀಸ್ ಹೆಡ್, ಸಚಿನ್ ಬೇಬಿ, ಆವೇಶ್ ಖಾನ್, ತಬ್ರೇಜ್ ಶಂಶಿ.
ತಂಡದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ; 24
ಖಾತೆಯಲ್ಲಿ ಉಳಿದ ಮೊತ್ತ: 2.42 ಕೋಟಿ
ಇನ್ನು ಕೊಂಡುಕೊಳ್ಳಬಹುದಾದ ಆಟಗಾರರ ಸಂಖ್ಯೆ: 03
