ಶ್ರೀಕಾಂತ್’ಗೆ ಧೋನಿ ಬ್ಯಾಟ್ ಉಡುಗೊರೆ

From MS Dhoni a signed bat for Kidambi Srikanth
Highlights

ಈ ವಿಚಾರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಶ್ರೀಕಾಂತ್, ’ಈ ಅದ್ಭುತವಾದ ಗಿಫ್ಟ್ ನೀಡಿದ್ದಕ್ಕೆ ಧೋನಿಗೆ ಧನ್ಯವಾದಗಳು. ನಾನೆಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಷ್ಟು ಖುಷಿಯಾಗಿದ್ದೇನೆ’ ಎಂದು ಧೋನಿ ಹಸ್ತಾಕ್ಷರವಿರುವ ಬ್ಯಾಟ್’ನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ನವದೆಹಲಿ[ಮೇ.21]: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ಧೋನಿ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ವಿಶ್ವ ನಂ.4 ಬ್ಯಾಡ್ಮಿಂಟನ್ ಆಟಗಾರ ಕಿದಾಂಬಿ ಶ್ರೀಕಾಂತ್'ಗೆ ಕಾಣಿಕೆಯಾಗಿ ನೀಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ. 
‘ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಶ್ರೀಕಾಂತ್, ನನ್ನನ್ನು ವಿಕೆಟ್ ಕೀಪಿಂಗ್‌ಗೆ ಪರಿಚಯಿಸಿದ ನನ್ನ ಗುರು ಕೆ.ವಿ.ಎಸ್. ಕೃಷ್ಣಾ ಅವರ ಮಗ. ಕೆಲ ದಿನಗಳ ಹಿಂದೆ ಧೋನಿ ಹಸ್ತಾಕ್ಷರಕ್ಕಾಗಿ ಶ್ರೀಕಾಂತ್ ನನ್ನ ಬಳಿ ಕೇಳಿದ್ದರು. ಧೋನಿ ಬಳಿ ಈ ವಿಷಯ ತಿಳಿಸಿದಾಗ ಬಹಳ ಸಂತೋಷದಿಂದ ಬ್ಯಾಟ್ ಮೇಲೆ ಸಹಿ ಹಾಕಿ, ವಿಶೇಷ ಸಂದೇಶದೊಂದಿಗೆ ಉಡುಗೊರೆ ನೀಡಿದ್ದಾರೆ’ ಎಂದು ಪ್ರಸಾದ್ ಹೇಳಿದ್ದಾರೆ.

loader