ಫೋರ್ಬ್ಸ್ ನಿಯತಕಾಲಿಕೆ ಗರಿಷ್ಠ ಸಂಭಾವನೆ ಪಡೆಯುತ್ತಿರುವ ಮಹಿಳಾ ಕ್ರೀಡಾಪಟುಗಳು ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ನ್ಯೂಯಾರ್ಕ್(ಆ.29): ವಿಶ್ವದ ಗರಿಷ್ಠ ಸಂಭಾವನೆ ಪಡೆಯುತ್ತಿರುವ ಮಹಿಳಾ ಕ್ರೀಡಾಪಟುಗಳು ಪಟ್ಟಿ ಬಿಡುಗಡೆಯಾಗಿದೆ. ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ಟಾಪ್ ಟೆನ್ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧೂ ಕಾಣಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಗರಿಷ್ಠ ಸಂಭಾವನೆ ಪಡೆಯುತ್ತಿರುವ ವಿಶ್ವದ ಮಹಿಳಾ ಕ್ರೀಡಾಪಟುಗಳ ಪೈಕಿ ಪಿವಿ ಸಿಂಧು 7ನೇ ಸ್ಥಾನ ಅಲಂಕರಿಸಿದ್ದಾರೆ. ಬ್ಯಾಡ್ಮಿಂಟನ್, ಎಂಡೋರ್ಸ್‌ಮೆಂಟ್ ಒಪ್ಪಂದ, ಜಾಹೀರಾತು ಸೇರಿದಂತೆ ಪಿವಿ ಸಿಂಧು ಆದಾಯ ಬರೋಬ್ಬರಿ 60 ಕೋಟಿ ರೂಪಾಯಿ(8.5 ಮಿಲಿಯನ್ ಡಾಲರ್).

ಟಾಪ್ ಟೆನ್ ಪಟ್ಟಿಯಲ್ಲಿ ಭಾರತದಿಂದ ಪಿವಿ ಸಿಂಧು ಮಾತ್ರ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನವನ್ನ ನಿರೀಕ್ಷೆಯಂತೆ ಅಮೇರಿಕಾ ಟೆನಿಸ್ ಪಟು ಸೆರೆನಾ ವಿಲಿಯಮ್ಸ್ ಅಲಂಕರಿಸಿದ್ದಾರೆ. ಸೆರೆನಾ ಆದಾಯ 127 ಕೋಟಿ ರೂಪಾಯಿ.