ಹಳೆ ನಿರ್ಧಾರಕ್ಕೆ ಜೋತುಬಿದ್ದ ಐಪಿಎಲ್ ವೇಳಾಪಟ್ಟಿ

sports | Thursday, February 15th, 2018
Suvarna Web Desk
Highlights

ಈ ಬಾರಿ ಪಂದ್ಯಗಳನ್ನು ಮುಂಚಿತವಾಗಿ ಆರಂಭಿಸುವುದಾಗಿ ಈ ಮೊದಲು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದರು. ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ, ಸಂಜೆ ಪಂದ್ಯವನ್ನು 7ಕ್ಕೆ ಆರಂಭಿಸುವುದಾಗಿ ಹೇಳಿದ್ದರು.

ಮುಂಬೈ(ಫೆ.15): ಕಳೆದ 10 ಆವೃತ್ತಿಗಳಂತೆ ಈ ಬಾರಿಯೂ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿವೆ. 2 ಪಂದ್ಯಗಳು ನಡೆಯುವ ದಿನದಂದು ಮೊದಲ ಪಂದ್ಯ ಸಂಜೆ 4ಕ್ಕೆ ಆರಂಭವಾಗಲಿದೆ. 12 ಪಂದ್ಯಗಳನ್ನು ಸಂಜೆ 4ಕ್ಕೆ ನಡೆಸುವುದಾಗಿ ಬಿಸಿಸಿಐ ತಿಳಿಸಿದೆ. ಇನ್ನುಳಿದ 48 ಪಂದ್ಯಗಳು ರಾತ್ರಿ 8ಕ್ಕೆ ಆರಂಭವಾಗಲಿವೆ.

ಈ ಬಾರಿ ಪಂದ್ಯಗಳನ್ನು ಮುಂಚಿತವಾಗಿ ಆರಂಭಿಸುವುದಾಗಿ ಈ ಮೊದಲು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದರು. ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ, ಸಂಜೆ ಪಂದ್ಯವನ್ನು 7ಕ್ಕೆ ಆರಂಭಿಸುವುದಾಗಿ ಹೇಳಿದ್ದರು. ಬಳಿಕ ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸಂಸ್ಥೆಯ ಮನವಿ ಮೇರೆಗೆ 2 ಪಂದ್ಯಗಳು ನಡೆಯುವ ದಿನಗಳಂದು ಮೊದಲ ಪಂದ್ಯ ಸಂಜೆ 5.30ಕ್ಕೆ, 2ನೇ ಪಂದ್ಯವನ್ನು ಸಂಜೆ 7ಕ್ಕೆ ಆರಂಭಿಸುವುದಾಗಿ ಹೇಳಲಾಗಿತ್ತು.

ಈ ಪ್ರಯೋಗದ ಬಗ್ಗೆ ಸಾಕಷ್ಟು ಚರ್ಚೆ ಸಹ ನಡೆದಿತ್ತು. ಕೆಲ ತಂಡಗಳ ಮಾಲೀಕರು ಸಹ ಇದಕ್ಕೆ ವಿರೋಧಿಸಿದ್ದರು ಎಂದು ವರದಿಯಾಗಿತ್ತು. ಇದೀಗ ಅಂತಿಮವಾಗಿ ಬಿಸಿಸಿಐ ತನ್ನ ಹಳೆಯ ಪದ್ಧತಿಯನ್ನೇ ಅನುಸರಿಸಲು ನಿರ್ಧರಿಸಿದೆ.

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Suvarna Web Desk