ನವದೆಹಲಿ(ಜು.20]: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ಜೂ.1, 2017ರಿಂದ ಮೇ 31, 2018ರ ಅವಧಿಯಲ್ಲಿ ನಾಲ್ವರು ಅಂತಾರಾಷ್ಟ್ರೀಯ ತಂಡಗಳ ನಾಯಕರನ್ನು ಬುಕ್ಕಿಗಳು ಸಂಪರ್ಕಿಸಿದ್ದಾಗಿ ಬಹಿರಂಗಗೊಳಿಸಿದೆ. 

ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ ವಿಷಯವನ್ನು ಸ್ವತಃ ಆಟಗಾರರೇ ಐಸಿಸಿ ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತಾ ಘಟಕಕ್ಕೆ ತಿಳಿಸಿದ್ದಾರೆ ಎಂದು ಐಸಿಸಿ ಹೇಳಿದೆ. ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿರುವ ಐಸಿಸಿ, ಕಳೆದೊಂದು ವರ್ಷದಲ್ಲಿ 18 ಪ್ರಕರಣಗಳ ತನಿಖೆ ನಡೆಸಿರುವುದಾಗಿ ತಿಳಿಸಿದೆ. 

ಕ್ರಿಕೆಟಿಗರು ಭ್ರಷ್ಟಾಚಾರ ನಿಗ್ರಹ ಘಟಕ ಸಂಪರ್ಕಿಸಿ ವಿಷಯ ತಿಳಿಸುತ್ತಿರುವುದಕ್ಕೆ ಐಸಿಸಿ ಸಂತಸ ವ್ಯಕ್ತಪಡಿಸಿದೆ.