Asianet Suvarna News Asianet Suvarna News

ವಿಂಡೀಸ್ ಪ್ರಚಂಡ ವೇಗಿ ಬೆನ್ಜಮಿನ್ ಈಗ ದಿನಗೂಲಿ ನೌಕರ..!

ವೆಸ್ಟ್ ಇಂಡಿಸ್ ಪರ 21 ಟೆಸ್ಟ್ ಹಾಗೂ 85 ಏಕದಿನ ಪಂದ್ಯವಾಡಿದ್ದ ಬೆನ್ಜಮಿನ್ ಕ್ರಮವಾಗಿ 61, 100 ವಿಕೆಟ್ ಕಬಳಿಸಿದ್ದರು.

Former West Indies Pacer Who Now Fixes Sight Screens in Antigua
  • Facebook
  • Twitter
  • Whatsapp

ಆ್ಯಂಟಿಗುವಾ(ಜು.05): ಒಂದು ಕಾಲದಲ್ಲಿ ಎದುರಾಳಿ ಬ್ಯಾಟ್ಸ್'ಮನ್'ಗಳ ಎದೆ ನಡುಗಿಸುತ್ತಿದ್ದ ವೆಸ್ಟ್ ಇಂಡಿಸ್'ನ ಮಾರಕ ವೇಗಿ ವಿನ್ಸ್ಟನ್ ಬೆನ್ಜಮಿನ್ ಈಗ ಆ್ಯಂಟಿಗುವಾ ಕ್ರೀಡಾಂಗಣದಲ್ಲಿ ಜಾಹೀರಾತು ಫಲಕಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.

ಕ್ರಿಕೆಟ್ ಜಗತ್ತಿನ ಮುಂದಿನ ಮಾಲ್ಕಮ್ ಮಾರ್ಸಷಲ್ ಎಂದೇ ಪ್ರಖ್ಯಾತಿ ಪಡೆದಿದ್ದ ಆ್ಯಂಟಿಗುವಾದ ಬೆನ್ಜಮಿನ್, ಇದೀಗ ಇಲ್ಲಿನ ಸರ್. ರಿಚರ್ಡ್ಸ್ ಕ್ರೀಡಾಂಗಣದಲ್ಲಿ ದಿನಕ್ಕೆ 70 ಡಾಲರ್ ವೇತನಕ್ಕೆ ಕೆಲಸ ಮಾಡುತ್ತಿರುವುದು ಮಾತ್ರ ವಿಪರ್ಯಾಸ.

ವೆಸ್ಟ್ ಇಂಡಿಸ್ ಪರ 21 ಟೆಸ್ಟ್ ಹಾಗೂ 85 ಏಕದಿನ ಪಂದ್ಯವಾಡಿದ್ದ ಬೆನ್ಜಮಿನ್ ಕ್ರಮವಾಗಿ 61, 100 ವಿಕೆಟ್ ಕಬಳಿಸಿದ್ದರು. ಒಂದು ಕಾಲದಲ್ಲಿ ಕರ್ಟ್ಲಿ ಆ್ಯಂಬ್ರೋಸ್ ಅವರಂತಹ ದಿಗ್ಗಜ ವೇಗಿಗಳಿಗೆ ಮಾರ್ಗದರ್ಶನ ನೀಡಿದ್ದ ಬೆನ್ಜಮಿನ್, ಹಾಲಿ ವಿಂಡೀಸ್ ಯುವ ವೇಗಿಗಳಿಗೆ ತರಬೇತಿ ನೀಡುತ್ತಿದ್ದಾರೆ.

Follow Us:
Download App:
  • android
  • ios