ಬೆಂಗಳೂರು[ನ.01]: Very Very Special ಬ್ಯಾಟ್ಸ್’ಮನ್ ಲಕ್ಷ್ಮಣ್’ಗಿಂದು 44ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವೆಂಗಿಪರಪು ವೆಂಕಟ ಸಾಯಿ ಲಕ್ಷ್ಮಣ್ ನವೆಂಬರ್ 01, 1974ರಲ್ಲಿ ಹೈದರಾಬಾದ್’ನಲ್ಲಿ ಜನಿಸಿದರು. ಭಾರತ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವು ತಂದಿತ್ತ ಕೀರ್ತಿ ಲಕ್ಷ್ಮಣ್’ಗೆ ಸಲ್ಲುತ್ತದೆ. 

1996ರಲ್ಲಿ ದಕ್ಷಿಣ ಆಫ್ರಿಕಾ ಎದುರು ಅಹಮದಾಬಾದ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ವಿವಿಎಸ್, ಎರಡನೇ ಇನ್ನಿಂಗ್ಸ್’ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದರು. 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತಾದ ಈಡನ್’ಗಾರ್ಡನ್’ನಲ್ಲಿ ನಡೆದ ಪಂದ್ಯದಲ್ಲಿ 281 ರನ್ ಸಿಡಿಸಿ ಟೀಂ ಇಂಡಿಯಾಗೆ ಗೆಲುವು ತಂದಿತ್ತ ಇನ್ನಿಂಗ್ಸ್’ನ್ನು ಭಾರತೀಯ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಪ್ರತಿನಿಧಿಸಿದ್ದರೂ ಒಮ್ಮೆಯೂ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನಪಡೆಯಲು ವಿವಿಎಸ್ ಸಫಲರಾಗಲಿಲ್ಲ. 134 ಟೆಸ್ಟ್ ಪಂದ್ಯಗಳಲ್ಲಿ 45.97ರ ಸರಾಸರಿಯಲ್ಲಿ 8,781 ರನ್ ಸಿಡಿಸಿದ್ದರೆ, 86 ಏಕದಿನ ಪಂದ್ಯಗಳಲ್ಲಿ 30.76ರ ಸರಾಸರಿಯಲ್ಲಿ 2,338 ರನ್ ಬಾರಿಸಿದ್ದಾರೆ. ಆಗಸ್ಟ್ 18, 2012ರಂದು ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿವಿಎಸ್ ಗುಡ್ ಬೈ ಹೇಳಿದರು.

ವಿವಿಎಸ್ ಲಕ್ಷ್ಮಣ್ ಹುಟ್ಟುಹಬ್ಬಕ್ಕೆ ದಿಗ್ಗಜರು ಶುಭಕೋರಿದ್ದು ಹೀಗೆ...