ಮೈದಾನದಲ್ಲಿ ಕ್ರಿಕೆಟ್ ವಿಷಯಕ್ಕಾಗಿ ಕೋಪಗೊಳ್ಳುತ್ತಿದ್ದ ಅವರಿಗೆ ಈಗ ಕಾಡಿದ್ದು ಸೈನಿಕರ ಮೇಲಿನ ಪ್ರೀತಿ.

ನವದೆಹಲಿ(ಏ.14): ಬ್ಯಾಟಿಂಗ್'ನಲ್ಲಿ ಸ್ಪೋಟಕ ಬ್ಯಾಟಿಂಗ್ ಆಡಿ ಅಭಿಮಾನಿಗಳಿಗೆ ರಂಜಿಸುತ್ತಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ ನಿನ್ನೆ ನಿಜವಾಗಲು ಕೋಪಗೊಂಡಿದ್ದರು.

ಮೈದಾನದಲ್ಲಿ ಕ್ರಿಕೆಟ್ ವಿಷಯಕ್ಕಾಗಿ ಕೋಪಗೊಳ್ಳುತ್ತಿದ್ದ ಅವರಿಗೆ ಈಗ ಕಾಡಿದ್ದು ಸೈನಿಕರ ಮೇಲಿನ ಪ್ರೀತಿ. ಟ್ವಿಟರ್'ನಲ್ಲಿ ಯೋಧನಿಗೆ ಬಿದ್ದ ಒಂದೊಂದು ಏಟಿಗೂ 100 ಜಿಹಾದಿಗಳನ್ನು ಹತ್ಯೆ ಮಾಡಿ' ಎಂದು ತಮ್ಮ ವ್ಯಾಘ್ರತನವನ್ನು ತೋರ್ಪಡಿಸಿದ್ದಾರೆ.

ಗಂಭಿರ್ ಈ ರೀತಿ ಕೋಪ ವ್ಯಕ್ತಪಡಿಸಿದ್ದಕ್ಕೆ ಕಾರಣ ಇತ್ತೀಚಿಗಷ್ಟೆ ಸಿ'ಆರ್'ಪಿಎಫ್ ಯೋಧನ ಮೇಲೆ ನಡೆದ ಹಲ್ಲೆಯ ಘಟನೆ. ಉಪಚುನಾವಣೆ ಸಂದರ್ಭದಲ್ಲಿ ಶಾಂತವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಯೋಧನ ಮೇಲೆ ಹಲ್ಲೆ ನಡೆಸಿದ್ದರು. ಯೋಧನ ಬಳಿ ಬಂದೂಕು ಇದ್ದರು. ಆತ ಶಾಂತವಾಗಿಯೇ ನಡೆದುಕೊಂಡಿದ್ದ.

ಮತ್ತೊಬ್ಬ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟರ್'ನಲ್ಲಿ ಯೋಧನ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.