ಆಟಗಾರನಿಗೆ ಒದ್ದ ರೆಫ್ರಿ 6 ತಿಂಗಳು ಸಸ್ಪೆಂಡ್..!

First Published 3, Feb 2018, 3:20 PM IST
Football referee handed six month ban for kicking player Watch his moment of madness
Highlights

ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್‌'ನ ನ್ಯಾನ್‌'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್‌'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು.

ಪ್ಯಾರೀಸ್(ಫೆ.02): ಫುಟ್ಬಾಲ್ ಪಂದ್ಯದ ವೇಳೆ ಆಟಗಾರನ ಕಾಲಿನಿಂದ ಒದ್ದ ಅಪರಾಧಕ್ಕಾಗಿ ಫ್ರಾನ್ಸ್‌'ನ ರೆಫ್ರಿ ಟೋನಿ ಚಾಪ್ರಾನ್ ಅವರನ್ನು ಮುಂದಿನ 6 ತಿಂಗಳು ಕಾಲ ನಿಷೇಧಿಸಲಾಗಿದೆ.

ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್‌'ನ ನ್ಯಾನ್‌'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್‌'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು.

ವಿಚಾರಣೆ ನಡೆಸಿದ ಫ್ರೆಂಚ್ ಫುಟ್ಬಾಲ್ ಫೆಡರೇಶನ್ ಈ ಕ್ರಮಕ್ಕೆ ಮುಂದಾಗಿದೆ. ಫ್ರೆಂಚ್ ಕಪ್ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳ 400ಕ್ಕೂ ಅಧಿಕ ಪಂದ್ಯಗಳಲ್ಲಿ ಚಾಪ್ರಾಲ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

loader