ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿರೋ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 22ರಂದು ಕಳ್ಳಾಟದ ತೀರ್ಪು ಹೊರಬೀಳಲಿದೆ. ಹಾಗಾದರೆ ಕಳ್ಳಾಟ ನಡೆಸಿದ 6 ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ
ಪ್ರೆಟೋರಿಯಾ(ಜು.15): ಕ್ರಿಕೆಟ್‌ನಿಂದ ಫಿಕ್ಸಿಂಗ್ ಭೂತವನ್ನ ದೂರವಿಡಲು ಐಸಿಸಿ ಅವಿರತ ಪ್ರಯತ್ನ ನಡೆಸುತ್ತಿದೆ. ಆದರೆ ಕೆಲ ಘಟನೆಗಳು ಕ್ರಿಕೆಟ್ ಆಟಕ್ಕೆ ಕಳಂಕ ತರುತ್ತಿದೆ. ಹೀಗೆ ಕಳ್ಳಾಟ ನಡೆಸಿ ಸಿಕ್ಕಿ ಬಿದ್ದಿರೋ 6 ಕ್ರಿಕೆಟಿಗರು ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ.
2015ರಲ್ಲಿ ಸೌತ್ಆಫ್ರಿಕಾ ದೇಸಿ ಟೂರ್ನಿಯಲ್ಲಿ ಕಳ್ಳಾಟ ನಡೆಸಿದ ಸೌತ್ಆಫ್ರಿಕಾ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಗುಲಾಮ್ ಬೋಡಿ ಸೇರಿದಂತೆ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ. 2015ರಲ್ಲಿ ಸೌತ್ಆಫ್ರಿಕಾದ ದೇಸಿ ಟೂರ್ನಿಯಲ್ಲಿ ಗುಲಾಮ್ ಬೋಡಿ, ಅಲ್ವಿರೋ ಪೀಟರ್ಸನ್, ತಮಿ ಸೊಲೆಕಿಲೆ, ಲೊನ್ವಾಬೋ ಸೊಟ್ಸೊಬೆ, ಜೀನ್ ಸೈಮೆಸ್, ಪುಮಿ ಮಟ್ಶಿಕ್ವೆ, ಹಾಗೂ ಎಥಿ ಎಮ್‌ಬಾಲಾಟಿ ವಿರುದ್ಧ ಪ್ರಕಣ ದಾಖಲಾಗಿತ್ತು.
ಗುಲಾಮ್ ಬೋಡಿಗೆ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ 20 ವರ್ಷ ನಿಷೇಧ ಹೇರಿದೆ. ಇದೀಗ ಪೆಟ್ರೋರಿಯಾ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆಗಸ್ಟ್ 22 ರಂದು ಅಂತಿಮ ತೀರ್ಪು ಹೊರಬೀಳೋ ಸಾಧ್ಯತೆ ಇದೆ.
