ಬೆಂಗಳೂರು(ಏ.16): ವಿಶ್ವಕಪ್ ಟೂರ್ನಿಗೆ ತಂಡಗಳು ಪ್ರಕಟಗೊಳ್ಳುತ್ತಿದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶ ಸೇರಿದಂತೆ ಪ್ರಮುಖ ತಂಡಗಳು ಈಗಾಗಲೇ ತಂಡ ಪ್ರಕಟಿಸಿದೆ. ಕೆಲ ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.  ಇತ್ತೀಚಿನ ಸರಣಿಗಳಲ್ಲಿ ತಂಡದ ಭಾಗವಾಗಿದ್ದ ಕ್ರಿಕೆಟಿಗರು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಂತಹ ಪ್ರಮುಖ ಐವರು ಕ್ರಿಕೆಟಿಗರು ವಿವರ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ರಿಷಬ್ ಪಂತ್:
ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋ ವಿಶ್ವಾಸದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ. 

ಅಂಬಾಟಿ ರಾಯುಡು:
ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ಅಂಬಾಟಿ ರಾಯುಡು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ರಾಯುಡು ಬದಲು ಆಯ್ಕೆ ಸಮಿತಿ ವಿಜಯ್ ಶಂಕರ್‌ಗೆ ಅವಕಾಶ ನೀಡಲಾಗಿದೆ. ರಾಯುಡು ಕೈಬಿಟ್ಟಿರೋದು ಇದೀಗ  ಹಲವು ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ- ಇವರಿಗೆ ಶಾಕ್ ನೀಡಿದ ಬಿಸಿಸಿಐ!

ಪೀಟರ್ ಹ್ಯಾಂಡ್ಸ್‌ಕಾಂಬ್:
ಆಸ್ಟ್ರೇಲಿಯಾ ತಂಡದಿಂದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧಕ್ಕೊಳಗಾದ ಮೇಲೆ, ಪೀಟರ್ ಹ್ಯಾಂಡ್ಸ್‌ಕಾಂಬ್ ತಂಡಕ್ಕೆ ಮರಳಿದ್ದರು. ಬಳಿಕ 12 ಪಂದ್ಯಗಳಲ್ಲಿ 479 ರನ್ ಸಿಡಿಸಿದ್ದರು. ಆದರೆ ಹ್ಯಾಂಡ್ಸ್‌ಕಾಂಬ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ.

ಜೋಶ್ ಹೇಜಲ್‌ವುಡ್:
ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿರುವ ಜೋಶ್ ಹೇಜಲ್‌ವುಡ್ ಕೂಡ ಆಸ್ಟ್ರೇಲಿಯಾ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಆಶ್ಯಸ್ ಸರಣಿಗಾಗಿ ಹೇಜಲ್‌ವುಡ್‌ಗೆ ಮತ್ತಷ್ಟು ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ಟೂರ್ನಿ ಬಳಿಕ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶ್ಯಸ್ ಸರಣಿ ನಡೆಯಲಿದೆ.  ಹೀಗಾಗಿ ವಿಶ್ವಕಪ್ ಟೂರ್ನಿಗೆ ಹೇಜಲ್‌ವುಡ್ ಆಯ್ಕೆಯಾಗಿಲ್ಲ. 

ಇದನ್ನೂ ಓದಿ: ಪಂತ್ ಬದಲು ಕಾರ್ತಿಕ್- ಆಯ್ಕೆ ಸಮಿತಿ ಬಿಟ್ಟಿಟ್ಟ ಕಾರಣ!

ಟಿಮ್ ಸೈಫರ್ಟ್:
ನ್ಯೂಜಿಲೆಂಡ್ ವಿಶ್ವಕಪ್ ತಂಡ ಪ್ರಕಟಿಸಿದಾಗ ಅಚ್ಚರಿ ಆಯ್ಕೆಯೊಂದಿತ್ತು. ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಬದಲು , ದೇಸಿ ಕ್ರಿಕೆಟ್ ಆಡುತ್ತಿದ್ದ ಟಾಮ್ ಬ್ಲಂಡೆಲ್‌ಗೆ ಅವಕಾಶ ನೀಡಲಾಗಿತ್ತು. ಈ ಮೂಲಕ ಟಿಮ್ ಸೈಫರ್ಟ್ ಅವಕಾಶ ವಂಚಿತರಾದರು.