ಮೊಹಾಲಿ[ಮಾ.10]: ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಏಕದಿನ ಕ್ರಿಕೆಟ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿದ್ದಾರೆ. ಮೊದಲ ಓವರ್’ನಲ್ಲೇ ಪ್ರವಾಸಿ ಆಸಿಸ್’ಗೆ ಆಘಾತ ನೀಡುವಲ್ಲಿ ಭುವಿ ಯಶಸ್ವಿಯಾಗಿದ್ದಾರೆ.

ಭಾರತ ನೀಡಿರುವ 359 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಮೊದಲ ಓವರ್’ನಲ್ಲೇ ಆಘಾತ ಎದುರಾಗಿದೆ. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್’ನ 4ನೇ ಎಸೆತದಲ್ಲಿ ಇನ್’ಸ್ವಿಂಗ್ ದಾಳಿಗೆ ಫಿಂಚ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 2019ರಲ್ಲೇ ಭುವಿ ನಾಲ್ಕನೇ ಬಾರಿಗೆ ಫಿಂಚ್ ಬಲಿ ಪಡೆದಂತಾಗಿದೆ. ಮೊದಲ ಮೂರು ಪಂದ್ಯಗಳಿಂದ ತಂಡದಲ್ಲಿ ಹೊರಗುಳಿದಿದ್ದ ಭುವಿ ಏಕದಿನ ಕ್ರಿಕೆಟ್’ಗೆ ವಿಕೆಟ್ ಕಬಳಿಸುವ ಮೂಲಕ ಭರ್ಜರಿ ಕಮ್’ಬ್ಯಾಕ್ ಮಾಡಿದ್ದಾರೆ.

ಧವನ್ ಸಿಡಿಲಬ್ಬರದ ಶತಕ: ಆಸಿಸ್’ಗೆ ಕಠಿಣ ಗುರಿ ನೀಡಿದ ಟೀಂ ಇಂಡಿಯಾ

ಇನ್ನು 4ನೇ ಓವರ್’ನಲ್ಲಿ ಬುಮ್ರಾ ಕರಾರುವಕ್ಕಾದ ದಾಳಿಗೆ ಶಾನ್ ಮಾರ್ಷ್ ಪೆವಿಲಿಯನ್ ಸೇರಿದ್ದಾರೆ. ಮಾರ್ಷ್ ಕೇವಲ 6 ರನ್ ಬಾರಿಸಿ ಬುಮ್ರಾ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದೀಗ ಆಸ್ಟ್ರೇಲಿಯಾ 3.3 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 12 ರನ್ ಗಳಿಸಿದೆ.