Asianet Suvarna News Asianet Suvarna News

ಕೊನೆಗೂ ನಾಡಾ ವ್ಯಾಪ್ತಿಗೆ ಸೇರಿದ ಬಿಸಿಸಿಐ!

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(NADA) ವ್ಯಾಪ್ತಿಗೆ ಕೊನೆಗೂ ಬಿಸಿಸಿಐ ಸೇರ್ಪಡೆಗೊಂಡಿದೆ. ಈ ತೀರ್ಮಾನದ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

Finally BCCI comes under NADA
Author
New Delhi, First Published Aug 10, 2019, 1:55 PM IST
  • Facebook
  • Twitter
  • Whatsapp

ನವದೆಹಲಿ(ಆ.10): ಹಲವು ವರ್ಷಗಳ ತಿಕ್ಕಾಟದ ಬಳಿಕ ಕೊನೆಗೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಶುಕ್ರವಾರ ನಾಡಾ ವ್ಯಾಪ್ತಿಗೆ ಸೇರಲು ಒಪ್ಪಿಕೊಂಡ ಬಿಸಿಸಿಐ ಈಗ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌)ಗಳಲ್ಲಿ ಒಂದೆನಿಸಿದೆ. ಸರ್ಕಾರದಿಂದ ನೆರವು ಪಡೆಯುವುದಿಲ್ಲ, ನಾವು ಆರ್ಥಿಕ ಸ್ವಾಯತ್ತತೆ ಹೊಂದಿದ್ದೇವೆ ಎಂದು ಬಿಸಿಸಿಐ ಎಷ್ಟೇ ವಾದಿಸಿದರೂ ಕೊನೆಗೂ ಕ್ರೀಡಾ ಸಚಿವಾಲಯದ ಒತ್ತಡಕ್ಕೆ ಮಣಿಯಬೇಕಾಯಿತು.

ಇನ್ಮುಂದೆ ನಾಡಾದಿಂದ ಡೋಪಿಂಗ್‌ ಪರೀಕ್ಷೆ

ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಝುಲಾನಿಯಾ, ನಾಡಾ ಪ್ರಧಾನ ನಿರ್ದೇಶಕ ನವೀನ್‌ ಅಗರ್‌ವಾಲ್‌ ಶುಕ್ರವಾರ ಇಲ್ಲಿ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಹಾಗೂ ಕ್ರಿಕೆಟ್‌ ಚಟುವಟಿಕೆಗಳ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂರನ್ನು ಭೇಟಿ ಮಾಡಿ ಸಭೆ ನಡೆಸಿದರು. ಈ ವೇಳೆ ನಾಡಾ ನಿಯಮಗಳನ್ನು ಪಾಲಿಸುವುದಾಗಿ ಬಿಸಿಸಿಐ, ಲಿಖಿತ ರೂಪದಲ್ಲಿ ನೀಡಿದ್ದಾಗಿ ತಿಳಿದು ಬಂದಿದೆ.

ನಾಡಾದಿಂದ ಪರೀಕ್ಷೆ: ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲೊಂದೆನಿಸಿರುವ ಕಾರಣ, ಇನ್ಮುಂದೆ ಭಾರತೀಯ ಕ್ರಿಕೆಟಿಗರ ಡೋಪಿಂಗ್‌ ಪರೀಕ್ಷೆಗಳನ್ನು ನಾಡಾ ನಡೆಸಲಿದೆ ಎಂದು ಝುಲಾನಿಯಾ ತಿಳಿಸಿದ್ದಾರೆ. ಇಷ್ಟುದಿನ ಸ್ವೀಡನ್‌ ಮೂಲದ ಐಡಿಟಿಎಂ ಎನ್ನುವ ಖಾಸಗಿ ಸಂಸ್ಥೆ ಭಾರತೀಯ ಕ್ರಿಕೆಟಿಗರ ಡೋಪಿಂಗ್‌ ಪರೀಕ್ಷೆ ನಡೆಸಿ, ರಾಷ್ಟ್ರೀಯ ಡೋಪಿಂಗ್‌ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸುತಿತ್ತು. ತಕ್ಷಣದಿಂದಲೇ ಐಡಿಟಿಎಂಗೆ ಡೋಪಿಂಗ್‌ ಪರೀಕ್ಷೆ ನಡೆಸುವ ಅಧಿಕಾರವನ್ನು ರದ್ದುಗೊಳಿಸಲಾಗಿದೆ ಎಂದು ನಾಡಾ ತಿಳಿಸಿದೆ.

ಹಾಕಿ ಗೋಲ್’ಕೀಪರ್ ಚಿಕ್ಟೆ 2 ವರ್ಷ ನಿಷೇಧ!

ಭಾರತೀಯ ಕ್ರಿಕೆಟಿಗರ ರಕ್ತ, ಮೂತ್ರದ ಮಾದರಿಯನ್ನು ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಸಂಗ್ರಹಿಸಬಹುದಾಗಿದೆ. ಅಲ್ಲದೇ ಸ್ಪರ್ಧೆ ನಡೆಯದ ಸಮಯದಲ್ಲೂ ಪರೀಕ್ಷೆ ನಡೆಸಲು ನಾಡಾಗೆ ಅಧಿಕಾರವಿದ್ದು, ಪ್ರತಿ ಆಟಗಾರ ವರ್ಷದಲ್ಲಿ 3 ನಿರ್ದಿಷ್ಟದಿನಾಂಕಗಳಂದು ಪರೀಕ್ಷೆಗೆ ಹಾಜರಾಗುವುದಾಗಿ ಅರ್ಜಿಯಲ್ಲಿ ತಿಳಿಸಬೇಕಿದೆ. ಒಂದೊಮ್ಮೆ ನಿಗದಿತ ದಿನದಂದು ಪರೀಕ್ಷೆಗೆ ಗೈರಾದರೆ, ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ನಾಡಾಗಿರಲಿದೆ. ಜಮೈಕಾದ ಉದ್ದೀಪನ ನಿಗ್ರಹ ಘಟಕದ ನಿಯಮದ ವಿರೋಧಿಸಿದ್ದ ತಾರಾ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ರನ್ನು ಒಂದು ವರ್ಷ ನಿಷೇಧಗೊಳಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ.

ನಾಡಾ ವ್ಯಾಪ್ತಿಗೆ ಸೇರಲು ಬಿಸಿಸಿಐ ಹಿಂಜರಿಯುತ್ತಿದ್ದೇಕೆ?

ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವುದಿಲ್ಲ. ನಮ್ಮದು ಸಾತ್ವಂತ್ರ ಸಂಸ್ಥೆ ಎನ್ನುವ ವಾದ ಮುಂದಿಟ್ಟುಕೊಂಡು ಬಿಸಿಸಿಐ ಇಷ್ಟುದಿನ ನಾಡಾ ವ್ಯಾಪ್ತಿಗೆ ಸೇರಿರಲಿಲ್ಲ. ಅಲ್ಲದೇ ನಾಡಾ ಬಳಸುವ ಡೋಪ್‌ ಪರೀಕ್ಷಾ ಕಿಟ್‌ಗಳ ಗುಣಮಟ್ಟದ ಬಗ್ಗೆ ಬಿಸಿಸಿಐ ಅನುಮಾನ ವ್ಯಕ್ತಪಡಿಸಿತ್ತು. ಪರೀಕ್ಷೆ ನಡೆಸುವ ವೈದ್ಯರು, ಮಾದರಿ ಸಂಗ್ರಹಿಸುವ ರೀತಿಯ ಬಗ್ಗೆಯೂ ಶಂಕೆ ಹೊಂದಿತ್ತು. ಆದರೆ ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ)ದಿಂದ ಮಾನ್ಯತೆ ಪಡೆದ ಕಿಟ್‌ಗಳನ್ನೇ ಬಳಸುವುದಾಗಿ ನಾಡಾ ಸ್ಪಷ್ಟಪಡಿಸಿದೆ. ಅಲ್ಲದೇ ಪರೀಕ್ಷೆ, ಮಾದರಿ ಸಂಗ್ರಹಿಸುವ ವೈದ್ಯರ ಬಗ್ಗೆ ಸಮಾಧಾನವಿಲ್ಲದಿದ್ದರೆ ಉನ್ನತ ಅಧಿಕಾರಿಗಳ ಸೇವೆಯನ್ನು ಹೆಚ್ಚುವರಿ ಶುಲ್ಕ ಪಡೆದು ಒದಗಿಸುವುದಾಗಿ ನಾಡಾ ಭರವಸೆ ನೀಡಿದೆ.

ಬಿಸಿಸಿಐ ಮೇಲೆ ಸಚಿವಾಲಯ ಒತ್ತಡ ಹೇರಿದ್ದು ಹೇಗೆ?

ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಲಿಷ್ಠವಾಗಿರುವ ಬಿಸಿಸಿಐ ಅನ್ನುವ ಬಗ್ಗಿಸಲು ಕ್ರೀಡಾ ಸಚಿವಾಲಯ ಹಲವು ವರ್ಷಗಳಿಂದ ಪ್ರಯತ್ನಿಸುತಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ವಿಶೇಷ ಯೋಜನೆಯೊಂದನ್ನು ರೂಪಿಸಿತು. ದಕ್ಷಿಣ ಆಫ್ರಿಕಾ ‘ಎ’ ಹಾಗೂ ಮಹಿಳಾ ತಂಡಗಳು ಭಾರತ ಪ್ರವಾಸ ಕೈಗೊಳ್ಳಲು ಸಚಿವಾಲಯ ಅನುಮತಿ ನೀಡದೆ ಬಿಸಿಸಿಐ ನಾಡಾ ವ್ಯಾಪ್ತಿಗೆ ಸೇರ್ಪಡೆಗೊಳ್ಳುವಂತೆ ಒತ್ತಡ ಹೇರಿತು. ಇದೀಗ ವಿದೇಶಿ ತಂಡಗಳ ಪ್ರವಾಸಕ್ಕೆ ಸಚಿವಾಲಯ ಹಸಿರು ನಿಶಾನೆ ತೋರಿದೆ ಎಂದು ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಖಚಿತ ಪಡಿಸಿದ್ದಾರೆ.

ಶೀಘ್ರ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ?

ಎಷ್ಟೇ ಪ್ರಯತ್ನ ನಡೆಸಿದರೂ, ನಾಡಾ ವ್ಯಾಪ್ತಿಗೆ ಸೇರುವುದರಿಂದ ತಪ್ಪಿಸಿಕೊಳ್ಳಲು ಬಿಸಿಸಿಐಗೆ ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೂ ಸೇರಿಸುವ ಕಾರ್ಯ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಒಂದೊಮ್ಮೆ ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬಂದರೆ, ಕ್ರಿಕೆಟ್‌ ಮಂಡಳಿ ಹಾಗೂ ಕ್ರಿಕೆಟ್‌ ಆಡಳಿತಗಾರರಿಗೆ ಭಾರೀ ಹಿನ್ನಡೆಯಾಗಲಿದೆ.ಚ್‌ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಇಂಡಿಯಾ ಸಿಮೆಂಟ್‌ನ ಉಪಾಧ್ಯಕ್ಷರಾಗಿದ್ದು ಸ್ವಹಿತಾಸಕ್ತಿ ಎಂಬ ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜಯ್‌ ಗುಪ್ತಾ ನೀಡಿದ್ದ ದೂರನ್ನು ಆಧರಿಸಿ ಬಿಸಿಸಿಐ ನೈತಿಕ ಅಧಿಕಾರಿ ಡಾ. ಡಿ.ಕೆ.ಜೈನ್‌, ರಾಹುಲ್‌ ದ್ರಾವಿಡ್‌ಗೆ ನೋಟಿಸ್‌ ಜಾರಿ ಮಾಡಿದ್ದರು.

Follow Us:
Download App:
  • android
  • ios