ಇನ್ಮುಂದೆ ನಾಡಾದಿಂದ ಡೋಪಿಂಗ್‌ ಪರೀಕ್ಷೆ

ಬಿಸಿಸಿಐ ಅನ್ನು ನಾಡಾ ವ್ಯಾಪ್ತಿಗೆ ಸೇರಿಸಬೇಕು ಎಂದು ವಾಡಾ ಐಸಿಸಿಗೆ ಸೂಚಿಸಿತ್ತು. ಕೊನೆಗೂ ಒತ್ತಡಕ್ಕೆ ಮಣಿದಿರುವ ಬಿಸಿಸಿಐ ನಾಡಾ ವ್ಯಾಪ್ತಿಗೆ ಬಂದಿದೆ.

BCCI set to work for 6 months with NADA

ಮುಂಬೈ[ಮಾ.19]: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ವಿಶ್ವ ಉದ್ದೀಪನಾ ನಿಯಂತ್ರಣ ಘಟಕ (ವಾಡಾ) ಆದೇಶದಂತೆ ರಾಷ್ಟ್ರೀಯ ಉದ್ದೀಪನಾ ನಿಯಂತ್ರಣ ಘಟಕ (ನಾಡಾ) ವ್ಯಾಪ್ತಿಗೆ ಸೇರಿಕೊಳ್ಳಲು ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಮೊದಲನೇ ಹಂತವಾಗಿ ನಾಡಾ ಜತೆ 6 ತಿಂಗಳ ಒಪ್ಪಂದ ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಹಾಕಿ ಗೋಲ್’ಕೀಪರ್ ಚಿಕ್ಟೆ 2 ವರ್ಷ ನಿಷೇಧ!

ಸೋಮವಾರ ಇಲ್ಲಿ ನಡೆದ ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಹಾಗೂ ಬಿಸಿಸಿಐ ಅಧಿಕಾರಿಗಳು, ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಜತೆ ಸಭೆ ನಡೆಸಿದ ಬಳಿಕ, ನಾಡಾ ವ್ಯಾಪ್ತಿಗೆ ಸೇರಿಕೊಳ್ಳಲು ನಿರ್ಧರಿಸಲಾಯಿತು. ‘ಐಸಿಸಿ, ಬಿಸಿಸಿಐ ಹಾಗೂ ನಾಡಾ ನಡುವಿನ 6 ತಿಂಗಳ ಒಪ್ಪಂದ ಇದಾಗಿದೆ. ನಮ್ಮ ನೋಂದಾಯಿತ ಕ್ರಿಕೆಟಿಗರ ಮಾದರಿಗಳನ್ನು ರಾಷ್ಟ್ರೀಯ ಉದ್ದೀಪನಾ ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್‌)ದಲ್ಲಿ ನಾಡಾ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇಷ್ಟು ದಿನ ಸ್ವೀಡನ್‌ ಮೂಲದ ಸಂಸ್ಥೆಯೊಂದು ಕ್ರಿಕೆಟಿಗರ ಡೋಪಿಂಗ್‌ ಪರೀಕ್ಷೆ ನಡೆಸುತ್ತಿತ್ತು. ನಾಡಾ ಕಾರ್ಯವೈಖರಿ ನಮಗೆ ಸಮಾಧಾನ ತರದಿದ್ದರೆ ಒಪ್ಪಂದವನ್ನು ನವೀಕರಿಸುವುದಿಲ್ಲ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಥೋಡ್ ಒತ್ತಾಯಕ್ಕೆ ನಾಡಾಗೆ ಸೇರ್ಪಡೆಗೊಂಡೆ: ವೀರೂ

ಬಿಸಿಸಿಐ ಅನ್ನು ನಾಡಾ ವ್ಯಾಪ್ತಿಗೆ ಸೇರಿಸಬೇಕು ಎಂದು ವಾಡಾ ಐಸಿಸಿಗೆ ಸೂಚಿಸಿತ್ತು. ಇತ್ತೀಚೆಗೆ ದುಬೈನಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಐಸಿಸಿ, ಬಿಸಿಸಿಐಗೆ ಈ ವಿಚಾರವನ್ನು ತಿಳಿಸಿತ್ತು.

Latest Videos
Follow Us:
Download App:
  • android
  • ios