Asianet Suvarna News Asianet Suvarna News

ಹಾಕಿ ಗೋಲ್’ಕೀಪರ್ ಚಿಕ್ಟೆ 2 ವರ್ಷ ನಿಷೇಧ!

ಚಿಕ್ಟೆ ನಿಷೇಧಿತ ಮದ್ದು ಸೇವಿಸಿರುವುದು ಉದ್ದೇಶಪೂರ್ವಕವಲ್ಲ. ಎಡಗಾಲಿನ ಗಾಯಕ್ಕೆ ಪಡೆಯುತ್ತಿದ್ದ ಚಿಕಿತ್ಸೆ ವೇಳೆ ವೈದ್ಯರ ಸಲಹೆ ಮೇರೆಗೆ ಸೇವಿಸಿದ ಔಷಧಿಯಲ್ಲಿ ನಿಷೇಧಿತ ಮದ್ದು ಇತ್ತು ಎಂದು ನಾಡಾ ತಿಳಿಸಿದೆ. ಔಷಧಿ ಸೇವನೆಗೆ ಅನುಮತಿ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ, ಜತೆಗೆ ಡೋಪಿಂಗ್‌ ಪರೀಕ್ಷೆ ವೇಳೆ ಅರ್ಜಿಯಲ್ಲಿ ಔಷಧಿ ಸೇವನೆ ಕುರಿತು ಉಲ್ಲೇಖಿಸುವುದನ್ನು ಸಹ ಮರೆತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

NADA bans hockey goalkeeper Akash Chikte for two years
Author
New Delhi, First Published Oct 20, 2018, 12:08 PM IST
  • Facebook
  • Twitter
  • Whatsapp

ನವದೆಹಲಿ(ಅ.20): ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಆಕಾಶ್‌ ಚಿಕ್ಟೆ ದೇಹದಲ್ಲಿ ನಿಷೇಧಿತ ಮದ್ದು ಪತ್ತೆಯಾದ ಕಾರಣ, ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ಅವರನ್ನು 2 ವರ್ಷಗಳ ಕಾಲ ನಿಷೇಧಿಸಿದೆ. 

ಫೆ.27ರಂದು ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರದ ವೇಳೆ ನಡೆಸಿದ್ದ ಡೋಪಿಂಗ್‌ ಪರೀಕ್ಷೆಯಲ್ಲಿ ಅವರು ನಿಷೇಧಿತ ನೊರಾಂಡ್ರೊಸ್ಟಿರೊನ್‌ ಮದ್ದು ಸೇವಿಸಿರುವುದು ಪತ್ತೆಯಾಗಿತ್ತು. ಹೀಗಾಗಿ, ಮಾ.27ರಂದೇ ಅವರನ್ನು ನಾಡಾ ತಾತ್ಕಾಲಿಕ ಅಮಾನತುಗೊಳಿಸಿತ್ತು. ಬಳಿಕ ಅ.8ರಂದು ನಡೆದ ಅಂತಿಮ ಸುತ್ತಿನ ವಿಚಾರಣೆ ಬಳಿಕ 2 ವರ್ಷಗಳ ನಿಷೇಧ ಹೇರಿದೆ.

ಚಿಕ್ಟೆ ನಿಷೇಧಿತ ಮದ್ದು ಸೇವಿಸಿರುವುದು ಉದ್ದೇಶಪೂರ್ವಕವಲ್ಲ. ಎಡಗಾಲಿನ ಗಾಯಕ್ಕೆ ಪಡೆಯುತ್ತಿದ್ದ ಚಿಕಿತ್ಸೆ ವೇಳೆ ವೈದ್ಯರ ಸಲಹೆ ಮೇರೆಗೆ ಸೇವಿಸಿದ ಔಷಧಿಯಲ್ಲಿ ನಿಷೇಧಿತ ಮದ್ದು ಇತ್ತು ಎಂದು ನಾಡಾ ತಿಳಿಸಿದೆ. ಔಷಧಿ ಸೇವನೆಗೆ ಅನುಮತಿ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ, ಜತೆಗೆ ಡೋಪಿಂಗ್‌ ಪರೀಕ್ಷೆ ವೇಳೆ ಅರ್ಜಿಯಲ್ಲಿ ಔಷಧಿ ಸೇವನೆ ಕುರಿತು ಉಲ್ಲೇಖಿಸುವುದನ್ನು ಸಹ ಮರೆತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಇದೇ ವೇಳೆ ನಿಷೇಧಿತ ಮದ್ದು ಸೇವಿಸಿರುವ ಇನ್ನೂ 6 ಕ್ರೀಡಾಪಟುಗಳನ್ನು ನಾಡಾ ಅಮಾನತುಗೊಳಿಸಿದೆ. ಕುಸ್ತಿಪಟು ಅಮಿತ್‌, ಕಬಡ್ಡಿ ಆಟಗಾರ ಪ್ರದೀಪ್‌ ಕುಮಾರ್‌, ವೇಟ್‌ಲಿಫ್ಟರ್‌ ನಾರಾಯಣ್‌ ಸಿಂಗ್‌, ಅಥ್ಲೀಟ್‌ಗಳಾದ ಸೌರಭ್‌ ಸಿಂಗ್‌, ಬಲ್ಜೀತ್‌ ಕೌರ್‌ ಹಾಗೂ ಸಿಮ್ರನ್‌ಜಿತ್‌ ಕೌರ್‌ ಅಮಾನತುಗೊಂಡಿರುವ ಕ್ರೀಡಾಪಟುಗಳು.

Follow Us:
Download App:
  • android
  • ios