Asianet Suvarna News Asianet Suvarna News

ಕುಚುಕುಗಳ ನಡುವೆ ಮೂಡಿದೆ ಬಿರುಕು: ಇನ್ನೆರಡೇ ದಿನದಲ್ಲಿ ಎಬಿಡಿಗೆ ಕೊಹ್ಲಿ ಟಾಂಗ್!: ಕಾರಣವೇನು ಗೊತ್ತಾ?

ಇವರಿಬ್ಬರೂ ವಿಶ್ವ ಕ್ರಿಕೆಟ್​​'ನ ದಿಗ್ಗಜರು, ಕ್ಲೋಸ್​​​ ಫ್ರೆಂಡ್ಸ್​​​ ಕೂಡ. ವರ್ಷಕ್ಕೆ 3 ತಿಂಗಳೂ ಒಟ್ಟಿಗೆ ಇರ್ತಾರೆ. ಆದ್ರೆ ಯಾಕೋ ಏನೋ ಇವರಿಬ್ಬರ ನಡುವೆ ಸ್ನೇಹ ಬಿರುಕು ಬಿಟ್ಟಂತೆ ಕಾಣತ್ತಿದೆ. ನಾನಾ ನೀನಾ ಅಂತ ಫೈಟಿಂಗ್​​ ನಡೆಸಿದಂತೆ ಕಾಣುತ್ತಿದೆ.

Fight between kohli and abd

ದೇಶ ಬೇರೆ ಬೇರೆಯಾದ್ರೂ ಕೊಹ್ಲಿ, ಎಬಿಡಿಯ ಮನಸ್ಸು ಒಂದೇ ಆಗಿಬಿಟ್ಟಿದೆ. ವರ್ಷದಲ್ಲಿ 3 ತಿಂಗಳು IPLನಲ್ಲಿ ಒಟ್ಟಿಗೆ ಕಳೆಯೋ ಇವರಿಬ್ಬರು ಕುಚುಕು ಗೆಳೆಯರಾಗಿಬಿಟ್ಟಿದ್ದಾರೆ. ಇಬ್ಬರೂ ಕ್ರಿಕೆಟ್​​ ಲೋಕವನ್ನ ಆಳುತ್ತಿರುವ ದಿಗ್ಗಜರೆ. ಆದ್ರೆ ಎಂದಿಗೂ ಇವರ ನಡುವೆ ಅಹಂ ಅನ್ನೋದು ಬಂದೇ ಇಲ್ಲ. ಈ ಜೋಡಿಯನ್ನ ನೋಡಿದವರೆಲ್ಲಾ ಸ್ನೇಹ ಅಂದ್ರೆ ಇದು ಎನ್ನುತ್ತಿದ್ರು.

ಕುಚುಕುಗಳ ನಡುವೆ ಮೂಡಿದೆ ಬಿರುಕು: ದಿಗ್ಗಜರ ನಡುವೆ ನಡೆದಿದೆ ಬಿಗ್​ ಫೈಟ್​​​

ಕ್ರಿಕೆಟ್​​ ಲೋಕದ ಕುಚುಕುಗಳ ನಡುವೆ ಈಗ ಬಿರುಕು ಬಿಟ್ಟಿದೆ. ಒಬ್ಬರನ್ನೊಬ್ಬರು ದ್ವೇಷಿಸಲು ಶುರು ಮಾಡಿದ್ದಾರೆ. ಒಬ್ಬರನ್ನ ಕಂಡರೆ ಒಬ್ಬರಿಗೆ ಆಗದಂತಾಗಿದೆ. ಅಷ್ಟಕ್ಕೂ ಇವರ ಈ ಕಚ್ಚಾಟಕ್ಕೆ ಕಾರಣವಾದ್ರೂ ಏನ್​ ಗೊತ್ತಾ..? ಎಬಿ ಡಿವಿಲಿಯರ್ಸ್​​​'ನ ಒಂದೇ ಒಂದು ಅದ್ಭುತ ಇನ್ನಿಂಗ್ಸ್​​​.

ಬಾಂಗ್ಲಾದೇಶ ವಿರುದ್ಧದ ಇದೊಂದು ಇನ್ನಿಂಗ್ಸ್​ ಎಬಿಡಿ ಮತ್ತು ಕೊಹ್ಲಿ ನಡುವೆ ಮುನಿಸು ಶುರುವಾಗಲು ಕಾರಣವಾಗಿದೆ. 6 ತಿಂಗಳ ನಂತರ ಮೊದಲ ಬಾರಿಗೆ ಕ್ರೀಸ್'​​ಗೆ ಇಳಿದಿದ್ದ ಎಬಿಡಿ ಬಾಂಗ್ಲಾ ಟೈಗರ್'​​ಗಳನ್ನ ಗೋಳುಹೊಯ್ದುಕೊಳ್ಳೋದಲ್ಲದೆ ಟೀಂ ಇಂಡಿಯಾ ಮತ್ತು ಟೀಂ ಇಂಡಿಯಾ ನಾಯಕನನ್ನ ಧೂಳಿಪಟ ಮಾಡಿದ್ರು. ತಮ್ಮ 108 ಬಾಲ್'​ಗಳಲ್ಲಿ 176 ರನ್​ ಟೀಂ ಇಂಡಿಯಾವನ್ನ ನಂಬರ್​​ 1 ಸ್ಥಾನದಿಂದ ಕಿಕೌಟ್​​ ಮಾಡಿಸಿದರೆ ನಾಯಕ ವಿರಾಟ್​​​ ಕೊಹ್ಲಿಯ ನಂಬರ್​​​ 1 ಬ್ಯಾಟ್ಸ್​​ಮನ್​ ಎಂಬ ಬಿರುದನ್ನ ಕಿತ್ತುಕೊಂಡಿದ್ದಾರೆ.

ಒಂದೇ ಒಂದು ಇನ್ನಿಂಗ್ಸ್​​​'ನೊಂದಿಗೆ ಕೊಹ್ಲಿ ಮತ್ತು ಕೊಹ್ಲಿ ಟೀಂಗೆ ಶಾಕ್​ ಕೊಟ್ಟಿದ್ದ ಎಬಿಡಿ ಸದ್ಯ ಬ್ಯಾಟ್ಸ್​​ಮನ್​ ರ್ಯಾಂಕಿಂಗ್'​ನಲ್ಲಿ ನಂಬರ್​​ 1. ತನ್ನ ತಂಡ ಸೌತ್​​ ಆಫ್ರಿಕಾ ಕೂಡ ನಂಬರ್​​​ 1. ಇದು ಟೀಂ ಇಂಡಿಯಾ ನಾಯಕನ ಪಿತ್ತ ನೆತ್ತಿಗೇರಿಸಿದೆ. ತನ್ನ ಪ್ರಾಣ ಸ್ನೇಹಿತನೇ ನನಗೆ ಮತ್ತು ನನ್ನ ತಂಡಕ್ಕೆ ಕಂಟಕನ್ನಾದನಲ್ಲ ಎಂದು ಕೈ ಕೈ ಹಿಸಿಕೊಳ್ತಿದ್ದಾರೆ.

ಕೊಟ್ಟಿದನ್ನ ವಾಪಸ್​​ ಕೊಡಲು ಕೊಹ್ಲಿ ರೆಡಿ: ಇನ್ನೆರಡೇ ದಿನಲ್ಲಿ ಎಬಿಡಿಗೆ ಕೊಹ್ಲಿ ಟಾಂಗ್​

ಹೇಗೆ ಎಬಿಡಿ ಒಂದೇ ಒಂದು ಇನ್ನಿಂಗ್ಸ್​​​'ನಲ್ಲಿ ತನ್ನ ಸ್ನೇಹಿತನಂತಿದ್ದ ಕೊಹ್ಲಿಗೆ ಶಾಕ್​ ಕೊಟ್ರೋ ಹಾಗೇ ಒಂದೇ ಇನ್ನಿಂಗ್ಸ್​'ನಲ್ಲಿ ಕೊಹ್ಲಿ ಎಬಿಡಿಗೆ ವಾಪಸ್​​ ಕೊಡಲು ಸಜ್ಜಾಗಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎಬಿಡಿ ಇನ್ನಿಂಗ್ಸ್​​ ಅನ್ನೂ ಮೀರಿಸುವಂತಹ ಆಟವಾಡಿ ಮತ್ತೆ ತನ್ನ ಮತ್ತು ತನ್ನ ತಂಡದ ನಂಬರ್​​ 1 ಪಟ್ಟವನ್ನ ಮರು ಪಡೆಯಲು ಪ್ಲಾನ್​ ಮಾಡಿದ್ದಾರೆ.

ನಾಳೆಯಿಂದ ನಡೆಯೋ ನ್ಯೂಜಿಲೆಂಡ್​​ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಏನೋ ನಂಬರ್​​ 1 ಪಟ್ಟವನ್ನ ಮತ್ತೆ ಪಡೆಯಬಹುದು. ಆದ್ರೆ ಅವರಿಗೆ ಟಫ್​ ಫೈಟ್​​ ನೀಡ್ತಿರೋ ಎಬಿಡಿಗೂ ಅತ್ತ ಸಾಲು ಸಾಲು ಸರಣಿಗಳು ಕಾದು ಕಳಿತ್ತಿವೆ. ಇತ್ತ ಕೊಹ್ಲಿ ತನ್ನ ಸ್ನೇಹಿತನಿಗೆ ಸವಾಲ್​ ಎಸೆಯುತ್ತಿದ್ರೆ ಅತ್ತ ಎಬಿಡಿ ಪ್ರತಿಸವಾಲು ಒಡ್ಡಲಿದ್ದಾರೆ. ಏನೇ ಆದ್ರೂ ಇಂತಹ ಫೈಟ್​ಗಳು ಕ್ರಿಕೆಟ್​​ನಲ್ಲಿ ಅತ್ಯವಶ್ಯಕ. ಸದ್ಯಕ್ಕಂತು ನಂಬರ್​​ 1 ಪಟ್ಟಕ್ಕಾಗಿ ಶುರುವಾಗಲಿರೋ ಯುದ್ಧ ಇನ್ನೂ ಕೆಲವು ತಿಂಗಳುಗಳ ಕಾಲ ನಡೆಯೋದಂತು ನಿಜ.

 

Follow Us:
Download App:
  • android
  • ios