ಫಿಫಾ ವಿಶ್ವಕಪ್: ಸೆಮಿಫೈನಲ್ ಎಂಜಾಯ್ ಮಾಡಿದ ’ಬಿಗ್ ಬಿ- ಛೋಟಾ ಬಿ’

FIFA World Cup Amitabh and Abhishek Bachchan enjoy semi final match in Russia
Highlights

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು 1-0 ಅಂತರದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟ ಬೆನ್ನಲ್ಲೇ ಅಮಿತಾಭ್ ಫ್ರಾನ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಸೇಂಟ್’ಪೀಟರ್ಸ್’ಬರ್ಗ್[ಜು.11]: ಬಾಲಿವುಡ್’ನ ಖ್ಯಾತ ಅಪ್ಪ ಮಗನ ಜೋಡಿಯಾದ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸದ್ಯ ರಷ್ಯಾ ಪ್ರವಾಸದಲ್ಲಿದ್ದು, ಸೇಂಟ್’ಪೀಟರ್ಸ್’ಬರ್ಗ್ ಮೈದಾನದಲ್ಲಿ ನಡೆದ ಫಿಫಾ ವಿಶ್ವಕಪ್’ನ ಬೆಲ್ಜಿಯಂ-ಫ್ರಾನ್ಸ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ.

ಇಂಡಿಯನ್ ಸೂಪರ್’ಲೀಗ್’ನಲ್ಲಿ ತನ್ನದೇ ಆದ ಫುಟ್ಬಾಲ್ ತಂಡವನ್ನು ಹೊಂದಿರುವ ಅಭಿಷೇಕ್ ಫುಟ್ಬಾಲ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಮಗನ ಉತ್ಸಾಹಕ್ಕೆ ಬಿಗ್ ಬಿ ಕೂಡಾ ಸಾಥ್ ನೀಡಿದ್ದಾರೆ.  ಸೇಂಟ್ ಪೀಟರ್ಸ್’ಬರ್ಗ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಅಪ್ಪ-ಮಗ ಕೈಯಲ್ಲಿ ಟಿಕೆಟ್ ಹಿಡಿದು ಜತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

 

#FraBel #worldcupsemifinals Congratulations France! @amitabhbachchan

A post shared by Abhishek Bachchan (@bachchan) on Jul 10, 2018 at 2:17pm PDT

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು 1-0 ಅಂತರದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಫ್ರಾನ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

loader