ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪನಾಮ ತಂಡವನ್ನು ಬೆಲ್ಜಿಯಂ 3-0 ಗೋಲುಗಳಿಂದ ಮಣಿಸಿ ಜಯದ ಕೇಕೆ ಹಾಕಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುಗಳಿಸಲು ವಿಫಲವಾಗಿದ್ದವು. 

ಸೋಚಿ[ಜೂ.18]: ವಿಶ್ವದ ಮೂರನೇ ಶ್ರೇಯಾಂಕ ಹೊಂದಿರುವ ಬಲಿಷ್ಠ ಬೆಲ್ಜಿಯಂ ತಂಡ ಅನಾಯಾಸವಾಗಿ ಪನಾಮ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪನಾಮ ತಂಡವನ್ನು ಬೆಲ್ಜಿಯಂ 3-0 ಗೋಲುಗಳಿಂದ ಮಣಿಸಿ ಜಯದ ಕೇಕೆ ಹಾಕಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುಗಳಿಸಲು ವಿಫಲವಾಗಿದ್ದವು. 

ಆದರೆ ದ್ವಿತಿಯಾರ್ಧದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಬೆಲ್ಜಿಯಂ ಪಂದ್ಯದ 47ನೇ ನಿಮಿಷದಲ್ಲಿ ಡ್ರೈಸ್ ಮರ್ಟೆನ್ಸ್ ತಂಡಕ್ಕೆ ಮೊದಲ ಗೋಲು ದಾಖಲಿಸಿ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ರೊಮೆಲು ಲುಕಾಕು[69 ಹಾಗೂ 75 ನಿ] 2 ರೋಚಕ ಗೋಲು ಬಾರಿಸಿ ಸಂಭ್ರಮಿಸಿದರು.