ನ್ಯೂಯಾರ್ಕ್[ಡಿ.22]: ರಷ್ಯಾದಲ್ಲಿ ನಡೆದ 2018ರ ಫುಟ್ಬಾಲ್‌ ವಿಶ್ವಕಪ್‌ ಅನ್ನು ಜಗತ್ತಿನಾದ್ಯಂತ 3.5 ಬಿಲಿಯನ್‌ (350 ಕೋಟಿ)ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಫಿಫಾ ಸಮೀಕ್ಷೆ ತಿಳಿಸಿದೆ. 

ಫ್ರಾನ್ಸ್‌ ಹಾಗೂ ಕ್ರೊವೇಷಿಯಾ ನಡುವಿನ ಫೈನಲ್‌ ಪಂದ್ಯವನ್ನು 112 ಕೋಟಿ ಮಂದಿ ಕನಿಷ್ಠ 1 ನಿಮಿಷವಾದರೂ ವೀಕ್ಷಿಸಿದ್ದಾರೆ ಎಂದು ಫಿಫಾ ಹೇಳಿದೆ. ಟೀವಿ ವೀಕ್ಷಕರು, ಆನ್‌ಲೈನ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಬಾರ್‌ ಹಾಗೂ ಹೋಟೆಲ್‌ಗಳಲ್ಲಿ ಏರ್ಪಡಿಸಿದ್ದ ದೊಡ್ಡ ಪರದೆಯ ಮೇಲೆ ಪ್ರಸಾರವಾಗುತ್ತಿದ್ದ ನೇರ ದೃಶ್ಯಗಳನ್ನು ವೀಕ್ಷಿಸಿದವರನ್ನು ಸಮೀಕ್ಷೆ ವೇಳೆ ಪರಿಗಣಿಸಲಾಗಿದೆ.

ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.