ಫುಟ್ಬಾಲ್ ಸ್ಟಾರ್ ಲಿಯೋನಲ್ ಮೆಸ್ಸಿ ಬಳಿ ಎಷ್ಟು ಕಾರುಗಳಿವೆ?

First Published 25, Jun 2018, 3:38 PM IST
FIFA 2018 World Cup: Car collection of Lionel Messi
Highlights

ಶ್ರೀಮಂತ ಕ್ರೀಡಾಪಟುಗಳ ಪೈಕಿ ಲಿಯೋನಲ್ ಮೆಸ್ಸಿ 3ನೇ ಸ್ಥಾನದಲ್ಲಿದ್ದಾರೆ. ಶ್ರೀಮಂತ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಮೆಸ್ಸಿ ಬಳಿ ಏಷ್ಟು ಕಾರುಗಳಿವೆ. ಅವುಗಳ ವಿವರ ಇಲ್ಲಿದೆ.

ಅರ್ಜೆಂಟೀನಾ(ಜೂ.25): ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಅರ್ಜೆಂಟೀನಾ ಫಟ್ಬಾಲ್ ಸ್ಟಾರ್ ಲಿಯೋನಲ್ ಮೆಸ್ಸಿ 3ನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಆದಾಯ 775.74 ಕೋಟಿ ರೂಪಾಯಿ. 

ಶ್ರೀಮಂತ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಮೆಸ್ಸಿ ಬಳಿ ದುಬಾರಿ ಬೆಲೆಯ 10 ಕಾರುಗಳಿವೆ. ಲಕ್ಸುರಿ ಕಾರುಗಳನ್ನ ಹೊಂದಿರೋ ಮೆಸ್ಸಿ, ವಿಶ್ವದ ಜನಪ್ರೀಯ ಕ್ರೀಡಾಪಟುಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ಮೆಸ್ಸಿ ಇರೋ ಎಲ್ಲಾ ಕಾರುಗಳು ಕೋಟಿ ಕೋಟಿ ಬೆಲೆಬಾಳುವ ಕಾರುಗಳು. ಫೆರಾರಿ 335ಎಸ್ ಸ್ಪೈಡರ್, ಫೆರಾರಿ ಎಫ್430 ಸ್ಪೈಡರ್, ಎಮ್‌ಸಿ ಸ್ಟ್ರಾಡಲ್, ಆಡಿ ಕ್ಯೂ7, ಆಡಿ ಆರ್8, ಮಿನಿ ಕೂಪರ್ ಎಸ್, ಡೊಡ್ಜ್ ಚಾರ್ಜರ್ ಎಸ್‌ಆರ್‌ಟಿ8, ರೇಂಜ್ ರೋವರ್ , ಟೋಯೋಟಾ ಪ್ರಿಯಸ್ ಸೇರಿದಂತೆ 19 ಕಾರುಗಳು ಮೆಸ್ಸಿ ಬಳಿ ಇವೆ.

ಲಿಯೋನಲ್ ಮೆಸ್ಸಿ ಬಳಿ ಕಾರು ಮಾತ್ರವಲ್ಲಿ ಎಂಬರರ್ ಜೆಟ್ ವಿಮಾನ ಕೂಡ ಹೊಂದಿದ್ದಾರೆ. ತಮ್ಮ ಪ್ರಯಾಣಕ್ಕಾಗಿ ಮೆಸ್ಸಿ ದುಬಾರಿ ಬೆಲೆಯ ಜೆಟಿ ವಿಮಾನ ಕೂಡ ಬಳಸುತ್ತಾರೆ.

loader