ಫಿಫಾ ವಿಶ್ವಕಪ್: ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಕ್ರೊವೇಷಿಯಾ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 12, Jul 2018, 10:01 AM IST
FIFA 2018 Mandzukic sends Croatia to first World Cup final
Highlights

ಪಂದ್ಯದ 5ನೇ ನಿಮಿಷದಲ್ಲೇ ಇಂಗ್ಲೆಂಡ್ ಗೋಲಿನ ಖಾತೆ ತೆರೆಯಿತು. ಫ್ರೀ ಕಿಕ್ ಅವಕಾಶದಲ್ಲಿ ಡೇವಿಡ್ ಬೆಹ್‌ಹ್ಯಾಮ್ ರೀತಿಯಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಕೀರನ್ ಟ್ರಿಪಿಯರ್ ಇಂಗ್ಲೆಂಡ್‌ಗೆ ಆರಂಭಿಕ ಮುನ್ನಡೆ ಒದಗಿಸಿದರು. 

ಮಾಸ್ಕೋ[ಜು.12]: ಫಿಫಾ ವಿಶ್ವಕಪ್ 2018ರ ಮತ್ತೊಂದು ಪಂದ್ಯ ರೋಚಕ ಅಂತ್ಯ ಕಂಡಿದೆ. ಇಲ್ಲಿನ ಲುಜ್ನಿಕಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರೊವೇಷಿಯಾ 2-1 ಗೋಲುಗಳ ಅಂತರದ ರೋಚಕ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಕ್ರೊವೇಷಿಯಾ ಫಿಫಾ ವಿಶ್ವಕಪ್ ಪ್ರವೇಶಿಸಿದ ಸಾಧನೆ ಮಾಡಿತು.

ಪಂದ್ಯ ಪೂರ್ಣಾವಧಿ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶಕ್ಕಾಗಿ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಹೆಚ್ಚುವರಿ ಸಮಯದಲ್ಲಿ ಮಾರಿಯೋ ಮ್ಯಾಂಡ್ಕುಕಿಕ್ ಬಾರಿಸಿದ ಅಮೋಘ ಗೋಲು ಕ್ರೊವೇಷಿಯಾ ತಂಡವನ್ನು ಫೈನಲ್ಸ್’ಗೇರಿಸುವಲ್ಲಿ ನೆರವಾಯಿತು.

ಪಂದ್ಯದ 5ನೇ ನಿಮಿಷದಲ್ಲೇ ಇಂಗ್ಲೆಂಡ್ ಗೋಲಿನ ಖಾತೆ ತೆರೆಯಿತು. ಫ್ರೀ ಕಿಕ್ ಅವಕಾಶದಲ್ಲಿ ಡೇವಿಡ್ ಬೆಹ್‌ಹ್ಯಾಮ್ ರೀತಿಯಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಕೀರನ್ ಟ್ರಿಪಿಯರ್ ಇಂಗ್ಲೆಂಡ್‌ಗೆ ಆರಂಭಿಕ ಮುನ್ನಡೆ ಒದಗಿಸಿದರು. ಮೊದಲಾರ್ಧದಲ್ಲೇ ಮುನ್ನಡೆಯನ್ನು ಹೆಚ್ಚಿಸಿಕೊಳ್ಳಲು ಇಂಗ್ಲೆಂಡ್ 2 ಅದ್ಭುತ ಅವಕಾಶ ದೊರೆಯಿತು. ಆದರೆ ನಾಯಕ ಹ್ಯಾರಿ ಕೇನ್ ಸಿಕ್ಕ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲ. ಮೊದಲಾರ್ಧದ ಮುಕ್ತಾಯಕ್ಕೆ ಇಂಗ್ಲೆಂಡ್ 1-0 ಮುನ್ನಡೆ ಕಾಯ್ದುಕೊಂಡಿತು. ಅಕ್ರಮಣಕಾರಿ ಆಟವಾಡಿದರೂ, ಗೋಲು ಗಳಿಸಲು ಸಾಧ್ಯವಾಗದೆ ಇದ್ದಿದ್ದು, ಕ್ರೊವೇಷಿಯಾ ದ್ವಿತೀಯಾರ್ಧದಲ್ಲಿ ಕೆಲ ಬದಲಾವಣೆ ಗಳೊಂದಿಗೆ ಆಡುವಂತೆ ಮಾಡಿತು.

68ನೇ ನಿಮಿಷದಲ್ಲಿ ಇವಾನ್ ಪರಿಸಿಚ್ ಕ್ರೊವೇಷಿಯಾ ಸಮಬಲ ಸಾಧಿಸಲು ಸಹಕಾರಿಯಾದರು. ಕಾರ್ನರ್ ಕಿಕ್ ವೇಳೆ ಪೆರಿಸಿಚ್ ಚೆಂಡನ್ನು ನಿಯಂತ್ರಣಕ್ಕೆ ಪಡೆದು, ಗೋಲು ಗಳಿಸಿದ ರೀತಿ ಇಂಗ್ಲೆಂಡ್ ಪಾಳಯದಲ್ಲಿ ನಡುಕ ಹುಟ್ಟಿಸಿತು. ವಿಶ್ವಕಪ್‌ನಲ್ಲಿ ಕ್ರೊವೇಷಿಯಾ ಪರ ಪೆರಿಸಿಚ್ ಬಾರಿಸಿದ 4ನೇ ಗೋಲು ಇದು. ಸಮಬಲ ಸಾಧಿಸಿದ ಬಳಿಕ ಕ್ರೊವೇಷಿಯಾ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 
 

loader