ಉರುಗ್ವೆ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿನ ಕಹಿ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟಕ್ಕೂ ರೋನಾಲ್ಡೋ ಮಾಡಿದ್ದೇನು? ಇಲ್ಲಿದೆ ವಿವರ.

ರಷ್ಯಾ(ಜು.02): ಫಿಫಾ ವಿಶ್ವಕಪ್ ಟೂರ್ನಿಯಿಂದ ಪೋರ್ಚುಗಲ್ ಹೊರಬೀಳುತ್ತಿದ್ದಂತೆ, ತಂಡದ ವಿರುದ್ಧಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದರು. ಆದರೆ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋಗೆ ಕ್ರೀಡಾ ಸ್ಪೂರ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪೋರ್ಚುಗಲ್ ಹಾಗೂ ಉರುಗ್ವೆ ನಡುವಿನ ನಾಕೌಟ್ ಪಂದ್ಯದಲ್ಲಿ ಉರುಗ್ವೆ ತಂಡ ಎಡಿನ್ಸನ್ ಕವಾನಿ ಹ್ಯಾಮ್‌ಸ್ಟ್ರಿಂಗ್ ಇಂಜುರಿಗೆ ತುತ್ತಾದರು. ಕುಟುಂತ್ತಾ ನಡೆಯುತ್ತಿದ್ದ ಕವಾನಿಗೆ ರೋನಾಲ್ಡೋ ಹೆಗಲು ನೀಜಿದರು. ಕವಾನಿಯನ್ನ ಹಿಡಿದು ರೋನಾಲ್ಡೋ ಮುನ್ನಡೆದರು. 

Scroll to load tweet…

ಮೈದಾನದಲ್ಲಿನ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ 1-2 ಅಂತರದಲ್ಲಿ ಸೋಲು ಕಂಡಿತ್ತು. ಈ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿತ್ತು. ಆದರೆ ಸೋಲಿನ ನಡುವೆಯೂ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಪ್ರಶಂಸೆ ವ್ಯಕ್ತವಾಗಿದೆ.