ಬಾಸ್ಕೆಟ್ ಬಾಲ್ ಲೀಗ್: ಅಗ್ರಸ್ಥಾನ ಕಾಯ್ದುಕೊಂಡ ಬೆಂಗಳೂರು ತಂಡ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 7:32 PM IST
FIBA recognized basketball league round five final scores
Highlights

ಬೆಂಗಳೂರಿನಲ್ಲಿ ನಡೆಯುತ್ತಿರುವ 3 ಬಾಸ್ಕೆಟ್ ಬಾಲ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ತಂಡ ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 3*3 ಬಾಸ್ಕೆಟ್ ಬಾಲ್ ಲೀಗ್ ಟೂರ್ನಿ 5ನೇ ಸುತ್ತಿನ ಪಂದ್ಯದ ಡಿಲೇಲ್ಸ್ ಇಲ್ಲಿದೆ.

ಬೆಂಗಳೂರು(ಆ.11):  ದೆಹಲಿ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ನಾಲ್ಕು ಸುತ್ತು ಪೊರಿಸಿರುವ 3*3 ಬಾಸ್ಕೆಟ್ ಬಾಲ್ ಲೀಗ್ ಇದೀಗ ಬೆಂಗಳೂರಿನಲ್ಲಿ ಕಳೆಗಟ್ಟಿದೆ. ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಶನ್ ಮಾನ್ಯತೆ ಪಡೆದಿರುವ 3ಬಿಎಲ್ ಲೀಗ್ ಟೂರ್ನಿಯ 5ನೇ ಸುತ್ತಿನ ಪಂದ್ಯಗಳು ನಗರದ ವೈಟ್‌ಫೀಲ್ಡ್‌ನಲ್ಲಿ ನಡೆಯುತ್ತಿದೆ.

ಪುರುಷರ 3 ಬಿಎಲ್ ಲೀಗ್ ಟೂರ್ನಿಯ 5 ಸುತ್ತಿನ ಮೊದಲ ರೌಂಡ್ ಪಂದ್ಯದ ಬಳಿಕ ಎ ಗುಂಪಿನಲ್ಲಿ ಬೆಂಗಳೂರು ತಂಡ ಅಗ್ರಸ್ಥಾನ ಪಡೆದಿಕೊಂಡಿದೆ. ಬೆಂಗಳೂರು 42 ಅಂಕ ಗಳಿಸೋ ಮೂಲಕ ಚೆನ್ನೈ ಹಾಗೂ ಕೊಚ್ಚಿ ತಂಡವನ್ನ ಹಿಂದಿಕ್ಕಿದೆ.

ಬಿ ಗುಂಪಿನಲ್ಲಿ ಡೆಲ್ಲಿ ಹೂಪರ್ಸ್ ಮೊದಲ ಸ್ಥಾನ ಅಲಂಕರಿಸಿದ್ದರೆ, ಸಿ ಗುಂಪಿನಲ್ಲಿ ಜೈಪುರ ಹಾಗೂ ಡಿ ಗುಂಪಿನಲ್ಲಿ ಹೈದರಾಬಾದ್ ತಂಡಗಳು ಅಗ್ರಸ್ಥಾನ ಪಡೆದಿದೆ.  ಈ ಮೂಲಕ ಬೆಂಗೂರಿನಲ್ಲಿ ಆಯೋಜಿಸಿದ್ದ ಪಂದ್ಯಗಳು ಅಭಿಮಾನಿಗಳ ಕುತೂಹಲವನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್ 11 ಹಾಗೂ  12 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿದೆ. ಇನ್ನು 6ನೇ ಹಾಗೂ ಅಂತಿಮ ಸುತ್ತಿನ ಪಂದ್ಯಗಳು ಆಗಸ್ಟ್ 25 ಹಾಗೂ 26 ರಂದು ಮುಂಬೈನಲ್ಲಿ ನಡೆಯಲಿದೆ. ಗೆದ್ದ ತಂಡ 4 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆಯಲಿದೆ. ಇನ್ನು ರನ್ನರ್ ಅಪ್ ತಂಡ 1 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆಯಲಿದೆ.

loader