ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿದಾಯದ ಸೂಚನೆ ನೀಡಿದ್ರಾ? ಕೇವಲ 29ವರ್ಷ ವಯಸ್ಸಿನ ಕೊಹ್ಲಿ ಈಗಲೇ ಅಚ್ಚರಿ ಹೇಳಿಕೆ ನೀಡಿದ್ದೇಕೆ? ಅಷ್ಟಕ್ಕೂ ಕೊಹ್ಲಿ ಹೇಳಿಕೆ ಆತಂಕ ತಂದಿದ್ದೇಕೆ? ಇಲ್ಲಿದೆ.

ಗುವಹಾಟಿ(ಅ.22): ಶತಕದ ಮೇಲೆ ಶತಕ ಸಿಡಿಸಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಯಸ್ಸು 29. ಆದರೆ ಆಗಲೇ ಕೊಹ್ಲಿ ವಿದಾಯದ ಸೂಚನೆ ನೀಡಿದ್ರಾ ಅನ್ನೋ ಆತಂಕ ಕಾಡತೊಡಗಿದೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಗೆಲುವಿನ ಬಳಿಕ ಕೊಹ್ಲಿ ಹೇಳಿಕೆ ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಂಡೀಸ್ ವಿರುದ್ಧ ಆಬ್ಬರಿಸಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಪೋಸ್ಟ್ ಮ್ಯಾಚ್ ಪ್ರೆಸಂಟೇಶನ್ ವೇಳೆ ಕೊಹ್ಲಿ ಹೇಳಿಕೆ ಮಾತ್ರ ನಿಜಕ್ಕೂ ಅಚ್ಚರಿ ತಂದಿದೆ. ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ಹೇಗೆ ಸಾಧ್ಯ ಅನ್ನೋ ಪ್ರಶ್ನೆಗೆ ಕೊಹ್ಲಿ, ನನ್ನಲ್ಲಿನ್ನು ಕೆಲ ವರ್ಷಗಳ ಕ್ರಿಕೆಟ್ ಮಾತ್ರ ಬಾಕಿ ಇದೆ. ಹೀಗಾಗಿ ಪ್ರತಿ ಪಂದ್ಯ ನನಗೆ ಅಷ್ಟೇ ಮುಖ್ಯ ಎಂದಿದ್ದಾರೆ.

ಕೊಹ್ಲಿ ಅಚ್ಚರಿ ಹೇಳಿಕೆಗೆ ಇಲ್ಲಿ ಕ್ಲಿಕ್ ಮಾಡಿ:

ಯಾವುದೇ ತಂಡವನ್ನ ಲಘುವಾಗಿ ಪರಿಗಣಿಸುವುದಿಲ್ಲ. ನನ್ನ ದೇಶವನ್ನ ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. ಹೀಗಾಗಿ ಸಿಕ್ಕಿರೋ ಅವಕಾಶವನ್ನ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂದು ಕೊಹ್ಲಿ ಹೇಳಿದ್ದಾರೆ.